ಅಲ್ಲಲ್ಲಿ ಸ್ವಾತಂತ್ರೋತ್ಸವ

ಯುನೈಟೆಡ್ ನಂದಿಗುಡ್ಡೆ
ಮಂಗಳೂರು, ಆ.15:ಯುನೈಟೆಡ್ ನಂದಿಗುಡ್ಡೆ ಇದರ ಆಶ್ರಯದಲ್ಲಿ ನಂದಿಗುಡ್ಡೆ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಕಾರ್ಪೊರೇಟರ್ ಶೈಲಜಾ ನೆರವೇರಿ ಸಿದರು. ಈ ಸಂದರ್ಭ ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ಕ್ಲಬ್‌ನ ಅಧ್ಯಕ್ಷ ವಿವಿಯನ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.
ಕಲ್ಲಡ್ಕ ಪಿಎಫ್‌ಐ
ಕಲ್ಲಡ್ಕ, ಆ.15: ಪಿಎಫ್‌ಐ ಕಲ್ಲಡ್ಕ ವಿಭಾಗದ ವತಿಯಿಂದ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಝಕಾರಿಯ ಗೋಳ್ತಮಜಲು ನೆರೆವೇರಿಸಿದರು.
ಅಧ್ಯಕ್ಷ ಸಿದ್ದೀಕ್ ಪನಾಮ ಸಂದೇಶ ನೀಡಿದರು. ಎಸ್‌ಡಿಪಿಐ ಗ್ರಾಪಂ ಸದಸ್ಯರಾದ ಯೂಸುಫ್ ಹೈದರ್, ಪಿಎಫ್‌ಐ ಗೋಳ್ತಮಜಲು ವಲಯಾಧ್ಯಕ್ಷ ಯೂನುಸ್, ಮುರಬೈಲ್ ವಲಯಾಧ್ಯಕ್ಷ ಜವಾಝ್ ಕಲ್ಲಡ್ಕ, ಹಿರಿಯರಾದ ಕೆ.ಎಚ್. ಇಬ್ರಾಹೀಂ ಮತ್ತಿತರರು ಉಪಸ್ಥಿತರಿದ್ದರು.
ಹಮೀದ್ ಅಲಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾಸರಗೋಡು: ಡಿವೈಎಫ್‌ಐ ಯುವಸಂಗಮ
ಕಾಸರಗೋಡು, ಆ.15: ‘ಕೋಮುವಾದಕ್ಕೆ
ವಿದಾಯ, ಜಾತ್ಯತೀತಕ್ಕೆ ಸಂಘಟಿತರಾ ಗೋಣ’ ಎಂಬ ಘೋಷಣೆಯೊಂದಿಗೆ ಕಾಸರಗೋಡಿನಲ್ಲಿ ಸೋಮವಾರ ಡಿವೈಎಫ್‌ಐ ಯುವ ಸಂಗಮ ನಡೆಯಿತು. ಜಿಲ್ಲೆಯ ವಿವಿಧ ಕಡೆಗಳಿಂದ ಮೆರವಣಿಗೆ ಮೂಲಕ ಆಗಮಿಸಿದ ಸಾವಿರಾರು ಕಾರ್ಯಕರ್ತರು ಹೊಸ ಬಸ್ ನಿಲ್ದಾಣದ ಪಿ.ಬಿ. ಮೈದಾನದಲ್ಲಿ ಸಂಗಮಿಸಿದರು.
ಬಳಿಕ ನಡೆದ ಸಮಾವೇಶವನ್ನು ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ವಿ. ಗೋವಿಂದನ್ ಉದ್ಘಾಟಿಸಿದರು. ಸಂಸದ ಪಿ. ಕರುಣಾಕರನ್, ಶಾಸಕ ಎಂ. ರಾಜಗೋಪಾಲ್, ಎ.ಕೆ ನಾರಾಯಣನ್, ಕೆ.ವಿ. ಕುಂಞಿರಾಮನ್, ಪಿ. ಜನಾರ್ದನನ್, ಮಾಜಿ ಶಾಸಕ ಸಿ.ಎಚ್ ಕುಂಞಂಬು, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಸತೀಶ್ಚಂದ್ರನ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಮಣಿಕಂಠನ್, ಸಜಿ ಮ್ಯಾಥ್ಯೂ, ಪಿ. ಶಿವಪ್ರಸಾದ್, ಸಿ.ಎ. ಜುಬೈರ್ ಉಪಸ್ಥಿತರಿದ್ದರು.
ಕಣಚೂರು ವಿದ್ಯಾಸಂಸ್ಥೆ
ಕೊಣಾಜೆ, ಆ.15: ಕಣಚೂರು ವಿದ್ಯಾಸಂಸ್ಥೆಯಲ್ಲಿ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಸಂಸ್ಥೆಯ ಮುಖ್ಯಸ್ಥ ಯು.ಕೆ.ಮೋನು ನೆರವೇರಿಸಿದರು.
ಕಣಚೂರು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ದೇವಿಪ್ರಸಾದ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಣಚೂರು ಶಾಲೆಯ ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿದರು.ವಿದ್ಯಾರ್ಥಿ ಸೌಮ್ಯಾಶ್ರೀ ಸ್ವಾತಂತ್ರ್ಯ ದಿನದ ಮಹತ್ವವನ್ನು ವಿವರಿಸಿದರು. ಉಪನ್ಯಾಸಕಿ ಸೌಮ್ಯಾ ಟಿ. ಕಣಚೂರು ದೇಶಭಕ್ತಿ ಗೀತೆ ಹಾಡಿದರು.
ಶಾಲಾ ಸಂಚಾಲಕ ಅಬ್ದುರ್ರಹ್ಮಾನ್, ಪ್ರಾಂಶುಪಾಲರಾದ ಯು.ಟಿ. ಇಕ್ಬಾಲ್ ಅಹ್ಮದ್, ಹೇಮಲತಾ, ಲಿನೆಟ್ ಡಿಸೋಜ ಉಪಸ್ಥಿತರಿದ್ದರು. ಹರ್ಷಿತ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಉಪನಾಯಕಿ ಸುವಿದಾ ವಂದಿಸಿದರು.







