ಆರು ಲಕ್ಷ ಮನೆ, 40 ಸಾವಿರ ನಿವೇಶನ ಹಂಚಿಕೆ ಗುರಿ: ಸಿದ್ದರಾಮಯ್ಯ
ಬೆಂಗಳೂರು, ಆ. 15: ಮುಂದಿನ ಎರಡು ವರ್ಷಗಳಲ್ಲಿ 6 ಲಕ್ಷ ಮನೆ ಗಳ ನಿರ್ಮಾಣ ಹಾಗೂ 40 ಸಾವಿರ ನಿವೇಶನಗಳನ್ನು ಹಂಚಲು ಉದ್ದೇ ಶಿಸಿದ್ದು, ಆ ಪೈಕಿ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ 1.60ಲಕ್ಷ ಮನೆಗಳು ಹಾಗೂ ನಗರ ಪ್ರದೇಶದಲ್ಲಿ 90ಸಾವಿರ ಮನೆಗಳನ್ನು ಎಸ್ಸಿ-ಎಸ್ಟಿ ವರ್ಗದವರಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಗರಿಷ್ಠ ಘಟಕ ವೆಚ್ಚ 7.5ಲಕ್ಷ ರೂ.ಗಳಲ್ಲಿ ಫಲಾನುಭವಿಗೆ ಶೇ.80ರಷ್ಟು ಅಂದರೆ 6ಲಕ್ಷ ರೂ. ಅನುದಾನ ನೀಡಲಾಗುವುದು. ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂ ಪೌರ ಕಾರ್ಮಿಕರಿಗೆ ಈ ಯೋಜನೆಯಡಿ 4,500ವಸತಿ ಗೃಹಗಳನ್ನು ನಿರ್ಮಿಸಿಕೊಡಲಾಗುವುದು.
ದೇವರಾಜ ಅರಸು ವಿಶೇಷ ವಸತಿ ಯೋಜನೆಯಡಿ 14 ವಿಶೇಷ ವರ್ಗದವರಿಗಾಗಿ 20 ಸಾವಿರ ಮನೆಗಳನ್ನು ನಿರ್ಮಿಸಿ ವಿತರಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಸಿದ್ದರಾಮಯ್ಯ, ಇದೀಗ ತಮ್ಮ ಸರಕಾರವು ಐದು ವರ್ಷಗಳ ಅವಧಿಯಲ್ಲಿ ಕಾವೇರಿ ಹಾಗೂ ಕೃಷ್ಣಾ ಕೊಳ್ಳದ ಎಲ್ಲ್ಲ ನೀರಾವರಿ ಯೋಜನೆಗಳಿಗೆ ಮಾಡುವ ವೆಚ್ಚ 60 ಸಾವಿರ ಕೋಟಿ ರೂ.ತಲುಪುವ ನಿರೀಕ್ಷೆ ಇದೆ. ಇದು ರೈತರ ಬಗೆಗಿನ ತಮ್ಮ ಸರಕಾರದ ಕಾಳಜಿ ಮತ್ತು ಬದ್ಧತೆಯನ್ನು ಬಿಂಬಿಸುತ್ತದೆ ಎಂದರು.
ಕೇಂದ್ರ ಸರಕಾರವೇ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಅಂಕಿ-ಅಂಶ ಗಳ ಪ್ರಕಾರ ಪ್ರಸಕ್ತ ವರ್ಷದ ಜನವರಿ ತಿಂಗಳಿನಿಂದ ಜೂನ್‌ವರೆಗಿನ ಅವಧಿಯಲ್ಲಿ 67,757 ಕೋಟಿ ರೂ.ಬಂಡವಾಳವು ರಾಜ್ಯದಲ್ಲಿ ಹೂಡಿಕೆ ಯಾಗಿ, ಇಡೀ ರಾಷ್ಟ್ರದಲ್ಲಿಯೇ ಕರ್ನಾಟಕ ಮೊದಲ ಸ್ಥಾನ ಪಡೆದಿದೆ ಎಂದು ಅವರು ತಿಳಿಸಿದರು.
ಮಹಾದಾಯಿ ನೀರು ಹಂಚಿಕೆ ವಿವಾದ ಸಂಬಂಧ ಇತ್ತೀಚೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ವ್ಯಕ್ತಪಡಿಸಿದ ಒಮ್ಮತದ ಸಹಕಾರಕ್ಕೆ ತಾನು ಆಭಾರಿ ಎಂದ ಅವರು, ನೆಲ-ಜಲ-ಭಾಷೆಯ ವಿಚಾರದಲ್ಲಿ ನಮ್ಮ ಸರಕಾರ ಯಾವುದೇ ರೀತಿಯ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಯಾರೂ ಅನಗತ್ಯ ಪ್ರಚೋದನೆ-ಭಾವೋದ್ವೇಗಕ್ಕೆ ಒಳಗಾಗದೆ ಸರಕಾರದ ಮೇಲೆ ಭರವಸೆ ಇಟ್ಟು ಸಹಕರಿಸಬೇಕೆಂದು ಮನವಿ ಮಾಡಿದರು. ಆಲಮಟ್ಟಿ ಆಣೆಕಟ್ಟನ್ನು 524.25 ಮೀಟರ್‌ಗೆ ಏರಿಸುವ ಹಿನ್ನೆಲೆಯಲ್ಲಿ ಮುಳುಗಡೆ ಪ್ರದೇಶದ ಭೂ ಸ್ವಾಧೀನ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳನ್ನು ಚುರುಕುಗೊಳಿಸಲು ಉನ್ನತಮಟ್ಟದ ಸಮಿತಿ ರಚಿಸಲಾಗಿದೆ. ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಸಮುದ್ರ ಸೇರುವ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಂಡು ಮೇಕೆದಾಟು ಸಮೀಪ ಕಾವೇರಿ ನದಿಗೆ ಸಮತೋಲನ ಜಲಾಶಯ ನಿರ್ಮಿಸಲು 5,912ಕೋಟಿರೂ.ಗಳ ಸಂಕ್ಷಿಪ್ತ ಯೋಜನಾ ವರದಿ ತಯಾರಿಸಲಾಗಿದೆ. ಮೇಕೆದಾಟು ಯೋಜನೆಯಿಂದ 400 ಮೆ.ವ್ಯಾ.ವಿದ್ಯುತ್ ಉತ್ಪಾದನೆಯ ಜೊತೆಗೆ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸಲು ಅನುಕೂಲ ಆಗಲಿದೆ ಎಂದರು.
ಮೂಢನಂಬಿಕೆ, ಕೋಮುವಾದದ ವಿರುದ್ಧ ಹೋರಾಟ ಅಗತ್ಯ: ಸಿದ್ದರಾಮಯ್ಯ ಕರೆ
ಬೆಂಗಳೂರು, ಆ. 15: 'ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆ ಯರು ನಮ್ಮ ಸಮಾಜದಲ್ಲಿ ಇನ್ನೂ ಸುರಕ್ಷಿತವಾಗಿ ಬಾಳುವ ಸ್ಥಿತಿಯಲ್ಲಿಲ್ಲ. ದಲಿತ ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ನಮ್ಮ ಸಮಾಜಕ್ಕೆ ಅಂಟಿದ ಕಳಂಕ. ಇಂತಹ ಅಮಾನವೀಯ ನಡವಳಿಕೆಗಳ ವಿರುದ್ಧ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿಯೇ ಚಳವಳಿ ನಡೆಯಬೇಕಿದೆ. ಅದೇ ರೀತಿ ಬಡತನ, ಅನಕ್ಷರತೆ, ಮೂಢನಂಬಿಕೆ, ಜಾತೀಯತೆ, ಕೋಮುವಾದದ ವಿರುದ್ಧವೂ ನಾವು ಹೋರಾಟ ನಡೆಸಬೇಕಿದೆ'ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಮಾಣೆ್ ಷಾ ಪರೇಡ್ ಮೈದಾನದಲ್ಲಿ ಏರ್ಪ ಡಿಸಿದ್ದ ಸ್ವಾತಂತ್ರೋತ್ಸವದ ಸಾರಂಭದಲ್ಲಿ ರಾಜ್ಯದ ಜನತೆಯನ್ನು ದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅರ್ಥ ಸಂಕುಚಿತವಾ ದುದಲ್ಲ, ವಿಶಾಲವಾದುದು. ಅದು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾ ದುದಲ್ಲ. ನಮ್ಮ ಭಾಷೆ, ಸಂಸ್ಕೃತಿ, ಆಹಾರ, ಉಡುಗೆ ತೊಡುಗೆ ಎಲ್ಲವೂ ನಮ್ಮ ಸ್ವಾತಂತ್ರ್ಯ. ಮತ್ತೊಬ್ಬರು ಈ ಸ್ವಾತಂತ್ರ್ಯವನ್ನು ಗೌರವಿಸುವುದು ನಿಜವಾದ ದೇಶಪ್ರೇಮ ಎಂದು ಬಣ್ಣಿಸಿದರು.
ದೇಶಭಕ್ತಿ ಎನ್ನುವುದು ರಾಜಕೀಯ ಘೋಷಣೆ ಆಗಬಾರದು. ಅದು ಪ್ರತಿಯೊಬ್ಬ ಭಾರತೀಯನ ಹೃದಯಂತಾರಾಳದಿಂದ ಪುಟಿದೆದ್ದು ಬರುವ ಜೀವಪರ ದ್ವನಿ. ದೇಶಭಕ್ತಿ ಎಂದರೆ ಭಾರತಮಾತೆಗೆ ಕೇವಲ ಜೈಕಾರ ಹಾಕುವುದಲ್ಲ. ಬಡವರ ಬಗ್ಗೆ ಕಾಳಜಿ, ಶೋಷಿತರ ಬಗ್ಗೆ ಅನುಕಂಪ ಮಹಿಳೆಯರ ಬಗ್ಗೆ ಗೌರವ ತೋರುವುದೇ ನಿಜವಾದ ದೇಶಪ್ರೇಮ. ಸಮಾನತೆಯ ತಳಹದಿಯ ಮೇಲೆ ಸಮಾಜ ನಿರ್ಮಾಣದ ಮೂಲಕ ಸಂವಿಧಾನದ ಆಶಯಗಳನ್ನು ಪ್ರಾಮಾಣಿಕವಾಗಿ ಈಡೇರಿಸುವುದೇ ದೇಶಪ್ರೇಮ.
ಈ ಪುಣ್ಯದ ಕಾಯಕವನ್ನೇ ತಮ್ಮ ಸರಕಾರ ಕಳೆದ ಮೂರು ವರ್ಷಗಳಿಂದ ಮಾಡುತ್ತಿದೆ ಎಂದರು. ಈ ದೇಶವನ್ನು ಪರಸ್ಪರ ಪ್ರೀತಿ, ಸಹಕಾರ ಮತ್ತು ಸೌಹಾರ್ದದ ಮೂಲಕ ಕಟ್ಟಬೇಕಾಗಿದೆ. ದ್ವೇಷಾಸೂಯೆಗಳಿಂದ ಕೆಡವಿಹಾಕಬಹುದು, ಕಟ್ಟಲಾಗುವುದಿಲ್ಲ. ಸಾವು-ನೋವುಗಳು ಜಗತ್ತಿನ ಯಾವ ಮೂಲೆಯ ಲ್ಲಾದರೂ ನಡೆಯಲಿ, ಅದಕ್ಕಾಗಿ ನಮ್ಮ ಮನ ಮರುಗಬೇಕು, ಸಂಭ್ರಮ ಪಡಬಾರದು ಎಂದು ಸಿದ್ದರಾಮಯ್ಯ ಅವರು ಹೇಳಿದರು.







