ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಬಲೂಚ್ ನಾಯಕರು
ಕ್ವೆಟ್ಟಾ,ಆ.15: ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ದಬ್ಬಾಳಿಕೆಯ ಬಗ್ಗೆ ಗಮನಸೆಳೆದಿದ್ದಕ್ಕಾಗಿ ಬಲೂಚಿಸ್ತಾನ ರಿಪಬ್ಲಿಕನ್ ಪಕ್ಷದ ನಾಯಕ ಅಶ್ರಫ್ ಶೇರ್‌ಜಾನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಶೀಘ್ರದಲ್ಲಿಯೇ ಬಲೂಚಿಸ್ತಾನವೂ ತನ್ನ ಸ್ವಾತಂತ್ರೋತ್ಸವವನ್ನು ಆಚರಿಸಲಿದೆಯೆಂದು ಅವರು ಟ್ವೀಟ್ ಮಾಡಿದ್ದಾರೆ. ಜೊತೆಗೆ ‘ಜೈ ಹಿಂದ್’ ಎಂಬ ಘೋಷಣೆಯನ್ನೂ ಸೇರಿಸಿದ್ದಾರೆ. ಯುರೋಪ್ ಒಕ್ಕೂಟ ಹಾಗೂ ವಿಶ್ವಸಂಸ್ಥೆಯಲ್ಲಿ ಬಲೂಚಿಸ್ತಾನದ ಪ್ರತಿನಿಧಿಯಾಗಿರುವ ಮೆಹ್ರಾನ್ ಮಾರ್ರಿ ಕೂಡಾ ಬಲೂಚಿಸ್ತಾನದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ಮೋದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬಲೂಚಿಸ್ತಾನ ವಿವಾದವನ್ನು ಪ್ರಸ್ತಾಪಿಸುವ ಬಗ್ಗೆ ಭಾರತದ ಪ್ರಧಾನಿ ತನ್ನ ಸ್ವಾತಂತ್ರೋತ್ಸವದ ಭಾಷಣದಲ್ಲಿ ತಿಳಿಸಿರುವುದು, ಬಲೂಚ್‌ನ ಜನತೆಯಲ್ಲಿ ಆಶಾವಾದವನ್ನು ಮೂಡಿಸಿದೆಯೆಂದು ಅವರು ಹೇಳಿದ್ದಾರೆ.
Next Story





