‘ದೇಶಕ್ಕಾಗಿ ಪ್ರತಿಯೊಬ್ಬ ಪ್ರಜೆಯಲ್ಲೂ ಸಮರ್ಪಣಾ ಭಾವವಿರಲಿ’
ಕುಂದಾಪುರ, ಆ.15: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ 70ನೆ ಸ್ವಾತಂತ್ರೋತ್ಸವ ಆಚರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿ, ಜೀವ ಬಲಿದಾನದೊಂದಿಗೆ ಬಂದಂತಹ ಸ್ವಾತಂತ್ರ್ಯ ನಮ್ಮದು, ಸಾತಂತ್ರೋತ್ಸವದ ಸಂಭ್ರಮದೊಂದಿಗೆ ದೇಶಕ್ಕಾಗಿ ಪ್ರತಿಯೊಬ್ಬ ಪ್ರಜೆಯಲ್ಲೂ ಸಮರ್ಪಣಾ ಭಾವವಿರಬೇಕು ಎಂದು ನುಡಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿಯ ಸದಸ್ಯ ಮಾಧವ ಎಂ. ಪೂಜಾರಿ, ಧರ್ಮದರ್ಶಿಗಳು ಚಕ್ರೇಶ್ವರಿ ಕೋಡಿ, ನಾಗರಾಜ ಕಾಂಚನ್, ಯೂಸ್ು ಕೋಡಿ, ರಫೀಕ್ ಕೋಡಿ, ಅಬು ಶೇಕ್ ಹಂಗಳೂರು, ಅಬ್ದುಲ್ಲಾ ಕೋಡಿ, ಪುರಸಭಾ ಸದಸ್ಯೆ ಜ್ಯೋತಿ ಹಾಗೂ ಬ್ಯಾರೀಸ್ ಅಂಗ ಸಂಸ್ಥೆಗಳ ಎಲ್ಲ ಮುಖ್ಯಸ್ಥರು ಉಪಸ್ಥಿತರಿದ್ದರು. ಸಹಶಿಕ್ಷಕ ಜಯಶೀಲ ಶೆಟ್ಟಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸಂದೀಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸುರೇಂದ್ರ ಶೆಟ್ಟಿ ವಂದಿಸಿದರು.
Next Story





