ರಿಯೋ: ಮೈ ಮುಚ್ಚುವ ಬಟ್ಟೆ ಧರಿಸಿ 100 ಮೀ. ಸ್ಪರ್ಧೆಯಲ್ಲಿ ಸೌದಿ ಮಹಿಳೆ

ರಿಯೋ ಡಿ ಜನೈರೋ, ಆ.16: ಒಲಿಂಪಿಕ್ಸ್ ಪತ್ರಿಭೆಗಳನ್ನು ಅನಾವರಣಗೊಳಿಸುವ ಕೇಂದ್ರ. ಇಲ್ಲಿ ವಿವಿಧ ರೀತಿಯ ಪ್ರತಿಭೆಗಳನ್ನು ಪ್ರದರ್ಶಿಸಿ ಹೊಸ ಹೊಸ ದಾಖಲೆ ನಿರ್ಮಿಸುತ್ತಾರೆ.ಈ ಬಾರಿ ರಿಯೋ ಒಲಿಂಪಿಕ್ಸ್ ನಲ್ಲಿ ಸೌದಿಯ ಮಹಿಳಾ ಸ್ಪರ್ಧಿಯೋರ್ವರು ತನ್ನ ಮೈ ಮುಚ್ಚುವ ಬಟ್ಟೆ ಧರಿಸಿಯೇ 100 ಮೀ. ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರಿಯೋ ಒಲಿಂಪಿಕ್ಸ್ ನಲ್ಲಿ ಭಾಗಿಯಾಗಿದ್ದ ಸೌದಿ ಅರೆಬಿಯದ ಕರೀಮನ್ ಅಬುಲ್ ಜದಾಯಲ್, ಮೈ ಮುಚ್ಚುವ ಬಟ್ಟೆ ಧರಿಸಿ 100 ಮೀಟರ್ ಓಟದಲ್ಲಿ ಸ್ಪರ್ಧಿಸಿ 14.61 ಸೆಕೆಂಡ್ ನಲ್ಲಿ 7ನೆಯವಳಾಗಿ ಗುರಿ ತಲುಪುವಲ್ಲಿ ಯಶಸ್ವಿಯಾಗಿ, ಈ ದಾಖಲೆ ನಿರ್ಮಿಸಿದ್ದಾರೆ.
ಮುಸ್ಲಿಮ್ ಮಹಿಳಾ ಸ್ಪರ್ಧಿ ಕರೀಮನ್, ಮೈ ತುಂಬ ಬಟ್ಟೆ ತೊಟ್ಟರೆ ಓಡಲು ಕಷ್ಟವಾಗುತ್ತೆ ಎನ್ನುವ ಇತರ ಸ್ಪರ್ಧಿಗಳ ಮಧ್ಯೆ ಈಕೆಯ ಸಾಧನೆ ವಿಶೇಷವಾದದ್ದು. ಇದೇ ಮೊದಲ ಬಾರಿಗೆ ಸೌದಿ ಅರೆಬಿಯದ ಮಹಿಳೆಯೋರ್ವಳು ರಿಯೋ ಒಲಿಂಪಿಕ್ಸ್ ನಲ್ಲಿ ಭಾಗಿಯಾಗಿ ಅಲ್ಲಿನ ಜನರ ಮನ ಗೆದ್ದಿರುವ ಅವರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.





