ಕಾಶ್ಮೀರದಲ್ಲಿ ಹಾವು ಕಚ್ಚಿ ಕೇರಳದ ಸೈನಿಕ ಮೃತ್ಯು
ಜಮ್ಮುಕಾಶ್ಮೀರ, ಆ.16: ಜಮ್ಮುಕಾಶ್ಮೀರದಲ್ಲಿ ಹಾವು ಕಚ್ಚಿ ಕೇರಳದ ಯೋಧನೊಬ್ಬ ಮೃತನಾಗಿದ್ದಾರೆಂದು ವರದಿಯಾಗಿದೆ. ಕೊಲ್ಲಂ ಚಮ್ಮಕ್ಕಾಡ್ ಅಭಿಲಾಶ್ ಭವನದ ಅನೀಷ್ ಬಾಬು(32) ಮೃತನಾದ ಸೈನಿಕರಾಗಿದ್ದಾರೆ. ಒಂದು ವಾರದ ಹಿಂದೆ ಅನೀಷ್‌ರಿಗೆ ಹಾವು ಕಚ್ಚಿತ್ತು ಎನ್ನಲಾಗಿದೆ.
ಇಂದು ಸಂಜೆ ಅನೀಷ್‌ರ ಪಾರ್ಥಿವ ಶರೀರವನ್ನು ಊರಿಗೆ ಕರೆತರಲಾಗುವುದು. ನಾಳೆ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.
Next Story





