ನಾಟೆಕಲ್: ಎಸ್‌ಡಿಪಿಐನಿಂದ ಸ್ವಾತಂತ್ರ ದಿನಾಚರಣೆ

ಕೊಣಾಜೆ, ಆ.16: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇರಳಕಟ್ಟೆ ಏರಿಯಾ ಇದರ ಜಂಟಿ ಆಶ್ರಯದಲ್ಲಿ 70ನೆ ಸ್ವಾತಂತ್ರ್ಯ ದಿನಾಚರಣೆಯನ್ನು ನಾಟೆಕಲ್ ಜಂಕ್ಷನ್‌ನಲ್ಲಿ ಆಚರಿಸಲಾಯಿತು.
ಪಿಎಫ್‌ಐ ದೇರಳಕಟ್ಟೆ ಏರಿಯಾ ಕಾರ್ಯದರ್ಶಿ ಶಹೀದ್ ಕಿನ್ಯ ಧ್ವಜಾರೋಹಣಗೈದರು. ಇದೇ ಸಂದರ್ಭದಲ್ಲಿ ನಾಟೆಕಲ್‌ನಲ್ಲಿ ಎಸ್‌ಡಿಪಿಐ ವತಿಯಿಂದ ನಿರ್ಮಿಸಿದ ಸಾರ್ವಜನಿಕ ಬಸ್ ತಂಗುದಾಣವನ್ನು ಅಬ್ಬಾಸ್ ಕಿನ್ಯಾ ಉದ್ಘಾಟಿಸಿದರು.
ಮುಹಮ್ಮದ್ ತಂಝೀಲ್, ನಾಗೇಶ್ ನಾಟೆಕಲ್, ಶಾಕೀರ್ ಮೊಂಟೆಪದವು, ನೌಫಲ್ ಪನೀರ್, ರಿಯಾಝ್, ಸಿಯಾಬ್ ಕಿನ್ಯ, ಬದ್ರುದ್ದೀನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story





