ಸ್ವಾತಂತ್ರೋತ್ಸವ ದೇಶದ ಅಭಿವೃದ್ಧಿಗೆ ಪ್ರೇರಣೆಯಾಗಲಿ: ತ್ವಾಹಾ ಸಅದಿ
ಸ್ವಾತಂತ್ರೋತ್ಸವ
ಉಪ್ಪಳ್ಳಿ, ಆ.16: ಸ್ವಾತಂತ್ರ ದಿನಾಚರಣೆಯು ಪ್ರತಿಯೊಬ್ಬ ಪ್ರಜೆಗೆ ದೇಶ ಪ್ರೇಮ ಬೆಳೆಸಲು ಕಾರಣವಾಗಲಿ ಹಾಗೂ ಆ ಮೂಲಕ ದೇಶದ ಅಭಿವೃದ್ದಿಗೆ ಪ್ರೇರಣೆಯಾಗಲಿ ಎಂದು ಉಪ್ಪಳ್ಳಿಯ ಶಾದುಲಿ ಜುಮಾ ಮಸೀದಿಯ ಧರ್ಮಗುರು ಪಿ.ಎಸ್.ತ್ವಾಹಾ ಸಅದಿ ತಿಳಿಸಿದ್ದಾರೆ.
ಅವರು ಚಿಕ್ಕಮಗಳೂರಿನ ಉಪ್ಪಳ್ಳಿಯ ಶಾದುಲಿ ಜುಮಾ ಮಸೀದಿಯ ಆವರಣದಲ್ಲಿ ಶಾದುಲಿ ಜುಮಾ ಮಸೀದಿ, ಮುರ್ಶಿದುತ್ತುಲ್ಲಾಬ್ ಸಾಹಿತ್ಯ ವೇದಿಕೆ, ಅಲ್-ಜಮಾಲಿಯ್ಯ ಹೈಯರ್ ಸೆಕೆಂಡರಿ ಮದ್ರಸ, ಎಸ್‌ವೈಎಸ್, ಎಸ್ಸೆಸ್ಸೆಫ್ ಹಾಗೂ ಖಲಂದರಿಯಾ ದಫ್ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ ಹೋರಾಟಗಾರರು ಸ್ವಾತಂತ್ರ ಪಡೆಯಲು ಪಟ್ಟ ತ್ಯಾಗ, ಹೋರಾಟ, ಬಲಿದಾನಗಳನ್ನು ವಿವರಿಸುತ್ತಾ ಆ ಹೋರಾಟಗಾರರನ್ನು ಮಾದರಿ ಮಾಡಿ ನಾವು ನಮ್ಮಲ್ಲಿ ದೇಶ ಪ್ರೇಮವನ್ನು ಬೆಳೆಸಿ ನಮ್ಮ ರಾಷ್ಟ್ರವನ್ನು ಅಭಿವೃದ್ಧಿಯುತ ರಾಷ್ಟ್ರವನ್ನಾಗಿ ಮಾರ್ಪಡಿಸಲು ದೇಶಕ್ಕೂ ಭಾರತೀಯರಿಗೂ ಸೇವೆಗೈಯ್ಯುವ ಪಣತೊಡಬೇಕೆಂದು ಅವರು ಹೇಳಿದರು.ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಧ್ವಜಾರೋಹಣಗೈದು ಮಾತನಾಡಿ, ಭಯೋತ್ಪಾದನೆ, ಉಗ್ರವಾದ ಈ ದೇಶದ ಅಭಿವೃದ್ಧಿಗೆ ಬಲುದೊಡ್ಡ ಅಪಾಯಕಾರಿಯಾಗಿದ್ದು, ಇವುಗಳನ್ನು ಮಟ್ಟ ಹಾಕಲು ಎಲ್ಲ ರೀತಿಯಲ್ಲೂ ಸರ್ವ ಭಾರತೀಯರು ಶ್ರಮಿಸಬೇಕೆಂದರು, ನಮ್ಮ ಮದ್ರಸಾಗಳು ದೇಶದ ಶಾಂತಿ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಮುರ್ಶಿದುತ್ತುಲ್ಲಾಬ್ ಸಾಹಿತ್ಯ ವೇದಿಕೆಯ ಆದಂ ಮಾತನಾಡಿದರು. ರೌಳತುಲ್ ಉಲೂಂ ದರ್ಸ್ ಮಕ್ಕಳು ಹಾಗೂ ಅಲ್-ಜಮಾಲಿಯ್ಯ ಮದ್ರಸಾ ಮಕ್ಕಳು ಸೇರಿ ರಾಷ್ಟ್ರಗೀತೆ ಹಾಡಿದರು. ದರ್ಸ್ ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಹಾಡಿ ವಿವಿಧ ಭಾಷೆಗಳಲ್ಲಿ ಸಂದೇಶ ಭಾಷಣ ಮಾಡಿದರು.
ವೇದಿಕೆಯಲ್ಲಿ ಮದ್ರಸಾ ಮುಖ್ಯೋಪಾಧ್ಯಾಯ ಅಬೂಸ್ವಾಲಿಹ್ ಸಖಾಫಿ, ಎಸ್ಸೆಸ್ಸೆಫ್‌ನ ರಾಜ್ಯಕೋಶಾಧಿಕಾರಿ ಉಸ್ಮಾನ್ ಹಂಡುಗುಳಿ, ಇಸ್ಮಾಯೀಲ್ ಹಾಜಿ, ಎಸ್‌ವೈಎಸ್‌ನ ಎಚ್‌ಅಬ್ದುರ್ರಝಾಕ್, ದಫ್ ಸಮಿತಿಯ ಖಲಂದರ್, ಯು.ಎಚ್.ಅಬ್ದುರ್ರಹ್ಮಾನ್, ಕೆಸಿಎಫ್‌ನ ಅಕ್ಬರ್, ಹಾಗೂ ಆಮಿರ್‌ಉಪಸ್ಥಿತರಿದ್ದರು. ಅಶ್ಫಾಕ್ ಸ್ವಾಗತಿಸಿ ಸಾದಿಕ್ ಧನ್ಯವಾದಗೈದರು.







