"ಪಾಕಿಸ್ತಾನಕ್ಕೆ ಹೋಗುವುದೆಂದರೆ ನರಕಕ್ಕೆ ಹೋದಂತೆ !": ಮನೋಹರ್ ಪಾರಿಕ್ಕರ್
ಅರುಣ್ ಜೇಟ್ಲಿ ಪಾಕಿಸ್ತಾನ ಭೇಟಿ ರದ್ದು,

ಹೊಸದಿಲ್ಲಿ,ಆಗಸ್ಟ್ 16: ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಪಾಕಿಸ್ತಾನವನ್ನು ನರಕಕ್ಕೆ ಹೋಲಿಸಿದ್ದಾರೆಂದು ವರದಿಯಾಗಿದೆ. "ಪಾಕಿಸ್ತಾನಕ್ಕೆಹೋಗುವುದೂ ನರಕಕ್ಕೂ ಹೋಗುವುದೂ ಒಂದೇ" ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. " ನಿನ್ನೆ ನಮ್ಮ ಸೈನಿಕರು ಐದು ಮಂದಿಯನ್ನು ವಾಪಸು ಕಳುಹಿಸಿದರು. ಪಾಕಿಸ್ತಾನಕ್ಕೆ ಹೋಗುವುದೂ ನರಕಕ್ಕೆ ಹೋಗುವುದೂ ಒಂದೇ ಆಗಿದೆ" ಎಂದು ಭದ್ರತಾ ಪಡೆ ಕಾಶ್ಮೀರದಲ್ಲಿ ಆಗಸ್ಟ್ 15ರಂದು ಐದು ಮಂದಿ ಭಯೋತ್ಪಾದಕರನ್ನು ಕೊಂದುರುಳಿಸಿದ್ದನ್ನು ಉದ್ದೇಶಿಸಿ ಹೇಳಿದ್ದಾರೆಂದು ವರದಿ ತಿಳಿಸಿದೆ.
ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ ಮೊದಲು ಬಲೂಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ್ದರು. ಸಾರ್ಕ್ ದೇಶಗಳ ವಿತ್ತ ಸಚಿವರ ಸಮ್ಮೇಳನ ನಡೆಯಲಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅದರಲ್ಲಿಭಾಗವಹಿಸುವುದಿಲ್ಲ ಎಂದು ತಿಳಿದು ಬಂದಿದೆ. ಅವರ ಬದಲಿಗೆ ಆರ್ಥಿಕ ವಿಷಯಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್‌ರು ಪಾಕಿಸ್ತಾನಕ್ಕೆ ಹೋಗಲಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಆದರೆ, ಪ್ರಧಾನಿ ನರೇಂದ್ರಮೋದಿ ಅಫಘಾನಿಸ್ತಾನದಿಂದ ಮರಳುವ ದಾರಿಯಾಗಿ ಪಾಕಿಸ್ತಾನಕ್ಕೆ ಖಾಸಗಿ ಭೇಟಿ ನೀಡಿದ್ದರೆಂಬುದು ಇಲ್ಲಿ ಸ್ಮರಣೀಯ. ಪಾಕ್ ಪ್ರಧಾನಿ ನವಾಝ್ ಶರೀಫ್ ಕುಟುಂಬದ ಮದುವೆಯೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮೋದಿ ಇಸ್ಲಾಮಾಬಾದ್‌ಗೆ ಖಾಸಗಿ ಭೇಟಿ ನೀಡಿದ್ದರು. ಇತೀಚೆಗಷ್ಟೇ ಗೃಹಸಚಿವ ರಾಜ್‌ನಾಥ್ ಸಿಂಗ್ ಸಾರ್ಕ್ ದೇಶಗಳ ಗೃಹ ಸಚಿವರ ಸಮ್ಮೇಳನದಲ್ಲಿ ಪಾಲ್ಗೊಂಡು ಮರಳಿದ್ದರು. ಅಲ್ಲಿ ತನ್ನೊಂದಿಗೆ ಉತ್ತಮವಾಗಿ ವರ್ತಿಸಿಲ್ಲ ಎಂದು ರಾಜ್‌ನಾಥ್ ಸಿಂಗ್ ಹೇಳಿದ್ದರು. ಅವರ ಭಾಷಣದ ವೇಳೆ ’ಬ್ಲಾಕ್ ಔಟ್’ ಮಾಡುವ ಪ್ರಯತ್ನ ಕೂಡಾ ನಡೆದಿತ್ತು ಎನ್ನಲಾಗಿದೆ.
ಇದೂ ಅಲ್ಲದೆ, ಭಾರತೀಯ ಪತ್ರಕರ್ತರನ್ನು ಸಭೆಯ ಒಳಕ್ಕೆ ಹೋಗಲು ಅನುಮತಿ ಇರಲಿಲ್ಲ. ರಾಜ್‌ನಾಥ್ ಅಲ್ಲಿ ಆಹಾರ ಸೇವಿಸದೆಯೇ ಮರಳಿದ್ದರು. ಸಮ್ಮೇಳನ ಮುಗಿದ ನಂತರ ಪಾಕಿಸ್ತಾನದ ಗೃಹಸಚಿವರು ಎಲ್ಲರನ್ನೂ ಔತಣಕ್ಕೆ ಆಹ್ವಾನಿಸಿ ಸ್ವಯಂ ಕಾರಿನಲ್ಲಿ ಕುಳಿತು ತೆರಳಿದ್ದರು. ಅವರ ಈ ವರ್ತನೆಗೆ ಬೇಸತ್ತು ರಾಜನಾಥ್ ಸಿಂಗ್ ಪಾಲ್ಗೊಂಡಿರಲಿಲ್ಲ. ತಾನು ಉಳಿದುಕೊಂಡಿದ್ದ ಹೊಟೇಲ್‌ನಲ್ಲಿ ರಾಜ್‌ನಾಥ್ ಸಿಂಗ್ ಊಟ ಮಾಡಿದ್ದರು.







