ಪಾಕಿಸ್ತಾನವನ್ನು ನರಕಕ್ಕೆ ಹೋಲಿಸಿದ ಪಾರಿಕ್ಕರ್
ರೇವಾರಿ(ಹರ್ಯಾಣ), ಆ.16: ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರೋತ್ಸವ ಭಾಷಣದಲ್ಲಿ ಬಲೂಚಿ ಸ್ತಾನದ ಉಲ್ಲೇಖ ಮಾಡಿದ ಒಂದು ದಿನದ ಬಳಿಕ, ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಪಾಕಿಸ್ತಾನವನ್ನು ನರಕಕ್ಕೆ ಹೋಲಿಸಿದ್ದಾರೆ.
ಹರ್ಯಾಣದ ರೇವಾರಿಯಲ್ಲಿ ಮಂಗಳವಾರ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಅವರು, ನಮ್ಮ ಸೈನಿಕರು ನಿನ್ನೆ ಐವರು ಭಯೋತ್ಪಾದಕರನ್ನು ಹಿಂದೆ ಕಳುಹಿಸಿದ್ದಾರೆ. ಪಾಕಿಸ್ತಾನಕ್ಕೆ ಹೋಗುವುದು ಅಥವಾ ನರಕಕ್ಕೆ ಹೋಗುವುದೆಂದರೆ ಒಂದೇ ಆಗಿದೆ ಎಂದರು.
ಸೋಮವಾರ ಭದ್ರತಾ ಪಡೆಗಳು ಕಾಶ್ಮೀರದ ಉರಿ ವಲಯದ ನಿಯಂತ್ರಣ ರೇಖೆಯಲ್ಲಿ ಗಡಿ ನುಸುಳುವಿಕೆ ಪ್ರಯತ್ನವೊಂದನ್ನು ವಿಫಲಗೊಳಿಸಿ ಐವರು ಭಯೋತ್ಪಾದಕರನ್ನು ಕೊಂದಿದ್ದವು.
ಭಯೋತ್ಪಾದಕರು ಹತರಾಗುತ್ತಲೇ ಇದ್ದರೂ, ಪಾಕಿಸ್ತಾನ ಅವರನ್ನು ಕಳುಹಿಸುವ ಪ್ರಯತ್ನ ಮುಂದುವರಿಸುತ್ತಲೇ ಇದೆ. ಅದು ಭಯೋತ್ಪಾದಕರನ್ನು ಬೆಂಬಲಿಸುತ್ತ ಬಂದಿದೆ. ಈಗ ಅದು ಆ ಬೆಂಬಲದ ಪರಿಣಾಮವನ್ನು ಅನುಭವಿಸುತ್ತಿದೆಯೆಂದು ಪಾರಿಕ್ಕರ್ ಹೇಳಿದರು.
Next Story





