ನಕ್ಸಲ್ ಕಮಾಂಡರ್ ಹತ್ಯೆ
ರಾಯಪುರ,ಆ.16: ಜಿಲ್ಲೆಯ ದರ್ಭಾ ಪೊಲೀಸ್ ಠಾಣಾ ವ್ಯಾಪ್ತಿಯ ಚಂದೋಮೆಟಾ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಮಾವೋವಾದಿಗಳ ಜನಸೇನಾದ ಕಮಾಂಡರ್ ಅರ್ಜುನ್ ಕೊಲ್ಲಲ್ಪಟ್ಟಿದ್ದಾನೆ. 2014ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಛತ್ತೀಸ್‌ಗಡದ ಬಸ್ತಾರ್ ಜಿಲ್ಲೆಯಲ್ಲಿ ಆ್ಯಂಬುಲನ್ಸ್‌ನ್ನು ಸ್ಫೋಟಿಸಿ ಐವರು ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ.
ಆ.10ರಿಂದಲೂ ಒಡಿಶಾದ ತುಲಸಿ ಗ್ರಾಮಕ್ಕೆ ಹೊಂದಿಕೊಂಡಿರುವ ಚಂದೋಮೆಟಾ ಅರಣ್ಯಪ್ರದೇಶದಲ್ಲಿ ಭದ್ರತಾ ಪಡೆಗಳ ಜಂಟಿ ತಂಡವೊಂದು ಶೋಧ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎಂದು ಐಜಿಪಿ ಎಸ್‌ಆರ್‌ಪಿ ಕಲ್ಲೂರಿ ಸುದ್ದಿಗಾರರಿಗೆ ತಿಳಿಸಿದರು.
Next Story





