ಪಂಜಾಬ್‌ನಲ್ಲಿ ಮತ್ತೆ ಕುರ್‌ಆನ್ ಅಪವಿತ್ರ
ಸಂಗ್ರೂರ್(ಪಂಜಾಬ್), ಆ.16: ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಗ್ರಾಮವೊಂದರಲ್ಲಿ ಪವಿತ್ರ ಕುರ್‌ಆನ್ ಅಪವಿತ್ರಗೊಳಿಸಿದ ಘಟನೆ ನಡೆದಿದೆ. ಸುಮಾರು 2 ತಿಂಗಳ ಹಿಂದೆ ಮಲೇರ್‌ಕೋಟ್ಲಾದಿಂದಲೂ ಇಂತಹದೇ ಪ್ರಕರಣವೊಂದು ವರದಿಯಾಗಿತ್ತು.
ಈ ಘಟನೆಯು ನಿನ್ನೆ ಸುಮನ್‌ನ ಮೆಹ್ಲಾನ್ ಚೌಕ್ ಗ್ರಾಮದ ಮಸೀದಿಯೊಂದರಲ್ಲಿ ನಡೆದಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.
ಕುರ್‌ಆನ್‌ನ 100ಕ್ಕೂ ಹೆಚ್ಚು ಹರಿದ ಪುಟಗಳು ಮಸೀದಿಯ ಆವರಣದಲ್ಲಿ ಕಂಡು ಬಂದಿದ್ದವು. ಆ ಪುಟಗಳನ್ನು ಬಳಿಕ ಮುಸ್ಲಿಂ ಸಂಪ್ರದಾಯದಂತೆ ಹುಗಿಯಲಾಯಿತೆಂದು ಅವರು ಹೇಳಿದ್ದಾರೆ.
ಪೊಲೀಸರು ಈ ಸಂಬಂಧ ಅಜ್ಞಾತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಈ ಹಿಂದೆ ಜೂ.24ರಂದು ಮಲೇರ್‌ಕೋಟ್ಲಾ ಪಟ್ಟಣದಲ್ಲಿ ಪವಿತ್ರ ಗ್ರಂಥವನ್ನು ಅಪವಿತ್ರ ಗೊಳಿಸಲಾಗಿತ್ತು. ದಿಲ್ಲಿಯ ಎಎಪಿ ಶಾಸಕ ನರೇಶ್ ಯಾದವ್ ಸಹಿತ ಆರೋಪಿಗಳನ್ನು ಬಂಧಿಸಲಾಗಿತ್ತು. ಯಾದವ್ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.
Next Story





