ಕಳ್ಳನನ್ನು ಬೆನ್ನಟ್ಟಿ ಹಿಡಿದ ಸಾಹಸಿ ಮುಹಮ್ಮದ್ ಹಾರಿಸ್‌ಗೆ ಪೊಲೀಸರಿಂದ ಅಭಿನಂದನೆ

ಮಂಗಳೂರು, ಆ.16: ಯುವತಿಯೋರ್ವಳ ಚಿನ್ನದ ಸರ ಎಗರಿಸಿ ಪರಾರಿಯಾಗಲೆತ್ನಿಸಿದ ಕಳ್ಳನನ್ನು ಬೆನ್ನಟ್ಟಿ ಹಿಡಿದ ಸಾಹಸಿ ಯುವಕ ಮುಹಮ್ಮದ್ ಹಾರಿಸ್‌ರನ್ನು ಪೊಲೀಸರು ಅಭಿನಂದಿಸಿದ್ದಾರೆ.
ನಗರದ ಹೊರವಲಯದ ಬೈಕಂಪಾಡಿ ಅಂಗರಗುಂಡಿ ನಿವಾಸಿ ಮುಹಮ್ಮದ್ ಹಾರಿಸ್‌ರನ್ನು ಪಾಂಡೇಶ್ವರ ಠಾಣೆಯ ಪೊಲೀಸ್ ಸಿಬ್ಬಂದಿ ಸನ್ಮಾನಿಸಿ ಅಭಿನಂದಿಸಿದರು.
ಶುಕ್ರವಾರ ಮಂಗಳೂರು ರೈಲ್ವೇ ನಿಲ್ದಾಣ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಚಿನ್ನದ ಸರ ಲೂಟಿಗೈಯಲು ಯತ್ನಿಸುತ್ತಿದ್ದ ಕಳ್ಳನನ್ನು ಮುಹಮ್ಮದ್ ಹಾರಿಸ್ ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ್ದರು.
ಈ ಸಂದರ್ಭ ಪಾಂಡೇಶ್ವರ ಠಾಣೆಯ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ, ಎಸ್ಸೈ ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು.
Next Story





