ಛೇ... ಜಪಾನೀ ಪೋಲ್ ವಾಲ್ಟರ್‌ನ ಒಲಿಂಪಿಕ್ಸ್ ಕನಸನ್ನು ಭಗ್ನಗೊಳಿಸಿದ...!

ರೀಯೊ ಡಿ ಜನೈರೊ, ಆ.16: ಜಪಾನ್‌ನ ಪೋಲ್ ವಾಲ್ಟರ್ ಒಲಿಂಪಿಕ್ಸ್ ಭವಿಷ್ಯವನ್ನು ಆತನ ಗುಪ್ತಾಂಗ ಕೊನೆಗೊಳಿಸಿದೆ.
ಪೋಲ್ ವಾಲ್ಟರ್ ಹಿರೊಕಿ ಒಗಿತಾ ಅವರು ಸೋಮವಾರ ಪುರುಷರ ಪೋಲ್ ವಾಲ್ಟ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 5.3 ಎತ್ತರಕ್ಕೆ ಯಶಸ್ವಿಯಾಗಿ ಹಾರಿದ್ದರು.ಆದರೆ ಕೊನೆ ಕ್ಷಣದಲ್ಲಿ ಅವರ ಗುಪ್ತಾಂಗ ಬಾರ್‌ಗೆ ತಾಗಿ ಕ್ರಾಸ್ ಬಾರ್ ಕೆಳಗೆ ಬಿದ್ದ ಪರಿಣಾಮವಾಗಿ ಅವರ ಪ್ರಯತ್ನ ವಿಫಲಗೊಂಡಿತು.
ಹಿರೊಕಿ ಫೈನಲ್‌ಗೆ ತಲುಪುವ ಯೋಜನೆಯಲ್ಲಿದ್ದರು. ಆ ನಿಟ್ಟಿನಲ್ಲಿ ಪ್ರಯತ್ನಿಸಿದ್ದರು. ಆದರೆ ಅನಿರೀಕ್ಷಿತ ಆಘಾತದಿಂದಾಗಿ ಅವರ ಫೈನಲ್ ಕನಸು ಭಗ್ನಗೊಂಡಿತು. 21 ಸ್ಥಾನದೊಂದಿಗೆ ಒಲಿಂಪಿಕ್ಸ್ ಅಭಿಯಾನ ಕೊನೆಗೊಳಿಸಿದರು. ಒಲಿಂಪಿಕ್ಸ್‌ನಿಂದ ಹೊರಬೀಳಲು ಇಂತಹ ಕಾರಣ ಸಾಕಾಗುತ್ತದೆ ಎನ್ನುವುದು ಜಗತ್ತಿಗೆ ಇದೀಗ ಗೊತ್ತಾಗಿದೆ !
Next Story





