ಜಾನುವಾರು ಸಾಗಾಟ: ಓರ್ವನ ಬಂಧನ
ಸುಳ್ಯ, ಆ.16: ಜಾನುವಾರು ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬೆಳ್ಳಾರೆಯಲ್ಲಿ ಪೊಲೀಸರು ಬಂಧಿಸಿದ್ದು, ಸಾಗಾಟಕ್ಕೆ ಬಳಸಿದ್ದ ಪಿಕಪ್ ವಾಹನ ಹಾಗೂ ಎರಡು ಹೋರಿಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಆರೋಪಿಗಳಾದ ಬಾಳಿಲದ ಹರೀಶ್ ಹಾಗೂ ಮಾಧವ ಎಂಬವರು ತಡರಾತ್ರಿ ಕಳಂಜದಿಂದ ಬೆಳ್ಳಾರೆ ಮಾರ್ಗವಾಗಿ ಮಾಡಾವು ಕಡೆಗೆ ಎರಡು ಹೋರಿಗಳನ್ನು ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದರು. ಗಸ್ತು ತಿರುಗುತ್ತಿದ್ದ ಪೊಲೀಸರು ವಾಹನವನ್ನು ತಡೆದಾಗ ಮಾಧವ ಓಡಿ ಪರಾರಿಯಾಗಿದ್ದು, ಹರೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಉಳುಮೆಗೆ ಹೋರಿಗಳನ್ನು ಸಾಗಿಸುತ್ತಿರುವುದಾಗಿ ಹರೀಶ್ ಹೇಳಿಕೆ ನೀಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ
Next Story





