ಕಿನ್ಯಾ: ಎಸ್ಕೆಎಸ್ಬಿವಿ ಹಾಗೂ ಕುತುಬಿಯ್ಯ ಹಳೆ ವಿದ್ಯಾರ್ಥಿ ಕಮಿಟಿಯಿಂದ ಸ್ವಾತಂತ್ರೋತ್ಸವ

ಕೊಣಾಜೆ, ಆ.16: ಎಸ್ಕೆಎಸ್ಬಿವಿ ಹಾಗೂ ಕುತುಬಿಯ್ಯಿ ಹಳೆ ವಿದ್ಯಾರ್ಥಿ ಕಮಿಟಿಯಿಂದ ಅಲ್ ಮದರಸತುಲ್ ಕುತುಬಿಯ್ಯಾ ಅಂಗಣದಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಸೈಯದ್ ಅಮೀರ್ ತಂಙಳ್ ಕಿನ್ಯಾ ದುಆ ನೆರವೇರಿಸಿದರು. ಸ್ಥಳೀಯ ಜಮಾಅತ್ ಅಧ್ಯಕ್ಷ ಹುಸೈನ್ ಕುಂಞ ಹಾಜಿ ಧ್ವಜಾರೋಹಣ ನೆರವೇರಿಸಿದರು.
ಸ್ಥಳೀಯ ಖತೀಬ್ ಖಾಸಿಂ ದಾರಿಮಿ ಮುಖ್ಯ ಭಾಷಣಗೈದರು. ಸ್ಥಳೀಯ ಮುದರ್ರಿಸ್ ಅಬೂಬಕರ್ ಅಲ್ ಖಾಸಿಮಿ, ಜಮಾಅತ್ ಕಾರ್ಯದರ್ಶಿ ಅಬೂಸ್ವಾಲಿಹ್ ಹಾಜಿ, ಹಳೆ ವಿದ್ಯಾರ್ಥಿ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮತ್ತು ಜಮಾಅತಿನ ಹಲವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಫಾರುಕ್ ಕಿನ್ಯಾ ಸ್ವಾಗತಿಸಿದರು. ಮದ್ರಸ ಮುಖೋಪಾಧ್ಯಾಯ ಫಾರೂಕ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು.
ಎಸ್ಬಿವಿ ಅಧ್ಯಕ್ಷ ರಂಶೀದ್ ಕಿನ್ಯಾ ವಂದಿಸಿದರು.
Next Story





