ಆಮ್ನೆಸ್ಟಿ ಸ್ಪಷ್ಟೀಕರಣ

ಆಗಸ್ಟ್ 13ರಂದು ನಡೆದ ಕಾರ್ಯಕ್ರಮ ವೊಂದಕ್ಕೆ ಸಂಬಂಧಿಸಿದಂತೆ, ಪ್ರಥಮ ಮಾಹಿತಿ ವರದಿಯ ಪ್ರಕಾರ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತದ ವಿರುದ್ಧ ಎಬಿವಿಪಿ ಪ್ರತಿನಿಧಿ ದೂರು ನೋಂದಾಯಿಸಿದ್ದಾರೆ.
ಈ ದೂರಿನಲ್ಲಿ ಉಲ್ಲೇಖಿಸಲಾದ ಆರೋಪಗಳಿಗೆ ಯಾವುದೇ ಹುರುಳಿಲ್ಲ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಲಿಪಶುವಾದ ಕುಟುಂಬಗಳ ಕಥೆಯನ್ನು ಮತ್ತು ಅವರಿಗೆ ಸಲ್ಲಬೇಕಾದ ಸಾಂವಿಧಾನಿಕ ಹಕ್ಕನ್ನು ಈ ನಾಗರೀಕ ಸಮಾಜದ ಸಂಘಟ ನೆಗಳು ತಡೆಯುತ್ತಿದೆ.
ಆಮ್ನೆಸ್ಟಿ ಇಂಟರ್ ನ್ಯಾಷನಲ್ ಭಾರತದ ತತ್ವದ ಪ್ರಕಾರ ಇತರ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಗುಣಮಟ್ಟದ ಸಾರ್ವತ್ರಿಕ ಘೋಷಣೆಯ ಪ್ರಕಾರ ಮತ್ತು ಭಾರತದ ಸಂವಿ ಧಾನದ ಪ್ರಕಾರ ಭಾರತದ ಪ್ರತಿ ನಾಗರಿಕನ ಹಕ್ಕು. ನಾವು ಯಾವುದೇ ರಾಜಕೀಯ, ಆರ್ಥಿಕ ಅಥವಾ ಸೈದ್ಧಾಂತಿಕ ಆಸಕ್ತಿ ಗಳಿಂದ ಮುಕ್ತವಾಗಿದ್ದೇವೆ.
ಆಗಸ್ಟ್ 13ರಂದು ಆಯೋಜಿಸಿದ ಕಾರ್ಯಕ್ರಮವು ಸಾರ್ವಜನಿಕವಾಗಿ ಲಭ್ಯವಿರುವ ಜುಲೈ 2015ರಲ್ಲಿ ಪ್ರಕಟಿಸ ಲಾದ ವರದಿಯ ಮೇಲೆ ಆಧಾರಿತವಾಗಿದೆ; (ಲಿನ್ಕ) ಈ ವರದಿಯು ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತದ ಭದ್ರತಾ ಸಿಬ್ಬಂದಿ ಎಸಗಿದ ಮಾನವ ಹಕ್ಕುಗಳ ಉಲ್ಲಂಘನೆಯ ಹಲವಾರು ಪ್ರಕರಣಗಳನ್ನು ಮತ್ತು ನಾಗರಿಕ ನ್ಯಾಯಕ್ಕಾಗಿ ಎದುರಿಸಿದ ಅಡೆತಡೆಗಳನ್ನು ದಾಖಲಿಸುತ್ತದೆ. ಇದು ವಿಶೇಷ ವಾಗಿ ವಿಭಾಗ 7ರ ಭದ್ರತಾ ಪಡೆಗಳ ಸದಸ್ಯರಿಗೆ ನೀಡುವ ಸಶಸ್ತ್ರ ಪಡೆಗಳು (ಜಮ್ಮು ಮತ್ತು ಕಾಶ್ಮೀರ) ವಿಶೇಷ ಶಕ್ತಿಯಕಾಯ್ದೆ, 1990 (ಅಖಅ)ಗೆ ನಾಗರಿಕ ನ್ಯಾಯಾಲಯ ಗಳಲ್ಲಿ ನೀಡಿರುವ ವಿನಾಯಿತಿಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಕೇಂದ್ರೀಕರಿಸುತ್ತದೆ.
ನಮ್ಮ ವರದಿ ಮಾನವ ಹಕ್ಕಿಗಾಗಿ ಹೋರಾಡುವ ಸಂಘಟನೆ ಗಳ, ಸಮಾಜದ, ವಕೀಲರ ಮತ್ತು ಸರಕಾರಿ ಅಧಿಕಾರಿಗಳ ಮಾಹಿತಿ ಹಕ್ಕಿನ ಅಪ್ಲಿಕೇಷನ್‌ನ, ಜಮ್ಮು ಕಾಶ್ಮೀರದಲ್ಲಿ ಬಲಿ ಯಾದ ಕುಟುಂಬಗಳ ಸದಸ್ಯರ ಸಂದರ್ಶನ, ಪೊಲೀಸ್ ಮತ್ತು ನ್ಯಾಯಾಲಯದ ದಾಖಲೆಗಳ ಪರೀಕ್ಷೆ ಮತ್ತು ಸಂದ ರ್ಶನಗಳ ಆಳವಾದ ಸಂಶೋಧನೆಯ ಫಲಿತಾಂಶವಾಗಿದೆ.
ಈ ಕಾರ್ಯಕ್ರಮದಲ್ಲಿ ಬಲಿಪಶುವಾದ ಕಾಶ್ಮೀರಿ ಕುಟುಂಬ ಗಳ ಕಥೆಯನ್ನು ಹಂಚಿಕೊಳ್ಳಲು ಮೂರು ಸದಸ್ಯರನ್ನು ಆಹ್ವಾನಿಸಲಾಯಿತು. ಈ ಕೆಳಗಿನ ದೂರಿಗೆ ಸಂಬಧಪಟ್ಟಂತೆ ನಮ್ಮ ಖಂಡನೆಯನ್ನು ಮಂಡಿಸುತ್ತೇವೆ.
1) ‘‘ಸಿಂಧುಜಾ ಅಯ್ಯಂಗಾರ್, ಬೆಂಗಳೂರಿನಲ್ಲಿ ಒಂದು ಖಾಸಗಿ ವಿಶ್ವವಿದ್ಯಾನಿಲಯ ರಾಜಶಾಸ್ತ್ರ ಉಪನ್ಯಾಸಕಿ, ಸೀಮಾ ಮುಸ್ತಫಾ ಮತ್ತು ರೋಶನ್ ಇಲಾಹಿ ರಾಷ್ಟ್ರ ವಿರೋಧಿಹಾಡುಗಳನ್ನು ಹಾಡಿದರು ಮತ್ತು ರಾಷ್ಟ್ರ ವಿರೋಧಿ ಘೋಷಣೆ ಕೂಗಿದರು.’’
ಸಿಂಧುಜಾ ಅಯ್ಯಂಗಾರ್ ಆಮ್ನೆಸ್ಟಿ ಇಂಟರ್ ನ್ಯಾಷ ನಲ್ ಭಾರತದ ಉದ್ಯೋಗಿ. ಅವರು ಘಟನೆಯಲ್ಲಿ ಯಾವುದೇ ಹಂತದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿ ರಲಿಲ್ಲ. ಸೀಮಾ ಮುಸ್ತಫಾ ಹಿರಿಯ ಪತ್ರಕರ್ತ. ಅವರು ಈ ಕಾರ್ಯಕ್ರಮದಲ್ಲಿ ಪೀಡಿತ ಕುಟುಂಬಗಳ ಜೊತೆ ಚರ್ಚೆ ಯನ್ನು ನಡೆಸಿಕೊಟ್ಟರು. ಯಾವುದೇ ಘೋಷಣೆಗಳನ್ನು ಕೂಗಲಿಲ್ಲ. ರೋಶನ್ ಇಲಾಹಿ (ಎಂಸಿ ಕಾಶ್ ಎಂದು ಕರೆಯ ಲ್ಪಡುತ್ತಾರೆ) ಕೊನೆಯಲ್ಲಿ ಸಂಗೀತ ಪ್ರದರ್ಶನದಲ್ಲಿ ಕಾಶ್ಮೀರದ ಹಿಂಸೆ ಮಧ್ಯೆ ಬೆಳೆಯುವ ಬಗ್ಗೆ ಹಾಡುಗಳನ್ನು ಹಾಡಿದರು. ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತ ಈ ಹಾಡನ್ನು ಧ್ವನಿ ಮುದ್ರಿಸಿ ವೀಡಿಯೊ ತುಣಕನ್ನು ಪೊಲೀಸರೊಂದಿಗೆ ಹಂಚಿ ಕೊಂಡಿದ್ದಾರೆ.
2)‘‘ಸಿಂಧುಜಾ ಅಯ್ಯಂಗಾರ್, ಸೀಮಾ ಮುಸ್ತಫಾ ಮತ್ತು ರೋಶನ್ ಇಲಾಹಿ ಭಾರತದ ಸೈನಿಕರ ವಿರುದ್ಧ ರಾಷ್ಟ್ರ ವಿರೋಧಿ ಭಾಷಣಗಳನ್ನು ನೀಡಿದರು.’’
ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತದ ಕಾರ್ಯಕ್ರಮ ಗಳು ನಿರ್ದೇಶಕ, ತಾರಾ ರಾವ್ ಮಾತ್ರ ಈ ಕಾರ್ಯಕ್ರಮ ದಲ್ಲಿ ಭದ್ರತಾ ಸಿಬ್ಬಂದಿ ಮೂಲಕ ನಡೆದ ಮಾನವ ಹಕ್ಕುಗಳು ಉಲ್ಲಂಘಟನೆಗಳ ಬಗ್ಗೆ ಭಾಷಣ ನೀಡಿದರು. ಈ ಬಗ್ಗೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತದ 2015ರ ವರದಿ ವಿವರ ನೀಡುತ್ತವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪುಸ್ತಕ ಪ್ರಾಧಿಕಾರ ದಲ್ಲಿರುವ ಸಮ್ಮಿಶ್ರ ಭಾಗವಾದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ), ಈ ವರದಿಯ ಶಿಫಾರಸು ಗಳನ್ನು ಸ್ವಾಗತಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಕುಟುಂಬಗಳು ತಮ್ಮ ವೈಯಕ್ತಿಕ ನಷ್ಟದ ಕಥೆಗಳನ್ನು ಹಂಚಿಕೊಂಡರು. ಅವರಲ್ಲಿ ಶಾಜಾದ್ ಅಹ್ಮದ್ ಖಾನ್ ಕೂಡ ಒಬ್ಬರು. ಈ ಘಟನೆಯಲ್ಲಿ ಐದು ಭದ್ರತಾ ಸಿಬ್ಬಂದಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತ ಬೆಂಗಳೂರಿನಲ್ಲಿ ರುವ ಕಾಶ್ಮೀರಿ ಪಂಡಿತ್ ಸಮುದಾಯದ ಪ್ರತಿನಿಧಿಗಳನ್ನೂ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಮಾತನಾಡಲು ಆಹ್ವಾನಿಸಿದ್ದರು.
3) ‘‘ಭಾರತೀಯ ಕಾಶ್ಮೀರ ಪಾಕಿಸ್ತಾನದ ಭಾಗವಾ ಗಬೇಕು ಎಂದು ಘೋಷಣೆಗಳನ್ನು ಕೂಗಿದರು’’.
ಯಾವುದೇ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತ ಉದ್ಯೋಗಿ ಯಾವುದೇ ಹಂತದಲ್ಲಿ ಯಾವುದೇ ಘೋಷಣೆ ಗಳನ್ನು ಕೂಗಲಿಲ್ಲ.
4) ‘‘ಈ ಕಾರ್ಯಕ್ರಮ ಪರೋಕ್ಷವಾಗಿ ಭಯೋತ್ಪಾದಕ ರನ್ನು ಬೆಂಬಲಿಸಿದೆ.’’
ಈ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಉಲ್ಲಂಘ ನೆಗಳ ಆರೋಪಗಳ ಮತ್ತು ಕಾಶ್ಮೀರದಲ್ಲಿ ಕುಟುಂಬಗಳಿಗೆ ನ್ಯಾಯದ ನಿರಾಕರಣೆ ಬಗ್ಗೆ ಮಾತ್ರ ಚರ್ಚೆಯಾಯಿತು. ಸಂಸತ್ತು, ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ನಾಗರಿಕ ಸಮಾಜದ ಸದಸ್ಯರು ಈ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಜುಲೈ 2016ರಲ್ಲಿ ಸವೋಚ್ಚ ನ್ಯಾಯಾಲಯ, ತನ್ನ ತೀರ್ಪಿನಲ್ಲಿ ಸಶಸ್ತ, ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ನಿರ್ಭಯ ಹಕಿಲ್ಲ ಎಂದು ಹೇಳಿಕೆ ಕೊಟ್ಟಿದೆ.
5)‘‘ಈ ಕಾರ್ಯಕ್ರಮ ಅಪರೋಕ್ಷವಾಗಿ ಪಾಕಿಸ್ತಾನ ಮತ್ತು ಐಎಸ್‌ಐ ಅನ್ನು ಬೆಂಬಲಿಸಿದೆ.’’
ಈ ಕಾರ್ಯಕ್ರಮದ ಗಮನ ಜಮ್ಮು ಮತ್ತು ಕಾಶ್ಮೀರ ನ್ಯಾಯ ನಿರಾಕರಣೆ ಮತ್ತು ಮಾನವ ಹಕ್ಕುಗಳು ಉಲ್ಲಂಘ ನೆಗಳ ಆರೋಪ ಮಾತ್ರವಾಗಿತ್ತು. ಆಮ್ನೆಸ್ಟಿ ಇಂಟರ್‌ನ್ಯಾಷನಲ್ ವ್ಯಾಪಕವಾಗಿ ಮಾನವ ಹಕ್ಕುಗಳ ಉಂಲ್ಲಂಘನೆ ಕುರಿತು, ಕಣ್ಮರೆಗಳು ಮತ್ತು ಬಲೂಚಿಸ್ಥಾನ ರಾಜಕೀಯ ಕಾರ್ಯಕರ್ತರ ಕಾನೂನು ಬಾಹಿರ ಹತ್ಯೆಗಳು, ಪತ್ರಕರ್ತರ ವಿರುದ್ಧ ಫೆಡರಲ್ ಆಡಳಿತದ ಉಲ್ಲಂಘನೆ, ಐಎಸ್‌ಐ ಸೇರಿದಂತೆ ಬುಡಕಟ್ಟು ಪ್ರದೇಶಗಳಲ್ಲಿ ಭದ್ರತಾ ಪಡೆಗಳ (ಊಅಅ), ಬಲಾತ್ಕಾರದ ಉಲ್ಲಂಘನೆ ಬಗ್ಗೆ ಪಾಕಿಸ್ತಾನದಲ್ಲೂ ಕೆಲಸ ಮಾಡಿದೆ.
6)‘‘ಎಬಿವಿಪಿ ಕಾರ್ಯಕರ್ತರು ದಾಳಿ ನಿಲ್ಲಿಸಲು ಪ್ರತ್ನಿಸಿದಾಗ, ಜನರು ಅವರ ಮೇಲೆ ದಾಳಿಯ ಪ್ರಯತ್ನ ಮಾಡಿದರು.’’
ಯಾವುದೇ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತ ಉದ್ಯೋಗಿ ಯಾರ ವಿರುದ್ಧವೂ ದಾಳಿ ಮಾಡಲಿಲ್ಲ. ಘಟನೆಯ ಕೊನೆಯಲ್ಲಿ ಹಾಜರಿದ್ದ ಕೆಲವರು ‘ಆಝಾದಿ’ (ಸ್ವಾತಂತ್ರ) ಕರೆಗಳನ್ನು ಘೋಷಿಸಿದರು. ನೀತಿಯ ಪ್ರಕಾರ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತ ಸ್ವಯಮಾಧಿಕಾರದ ಬೇಡಿಕೆಗಳ ವಿರುದ್ಧ ಅಥವಾ ಪರವಾಗಿ ಯಾವುದೇ ಸ್ಥಾನ ವನ್ನು ತೆಗೆದುಕೊಳ್ಳುವುದಿಲ್ಲ. ಆದಾಗ್ಯೂ, ಆಮ್ನೆಸ್ಟಿ ಇಂಟರ್ ನ್ಯಾಷನಲ್ ಭಾರತ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕನ್ನು ಶಾಂತಿ ಯುತವಾಗಿ ರಾಜಕೀಯ ಪರಿಹಾರಗಳಿಗೆ ಸಲಹೆ ಮಾಡುವ ಹಕ್ಕನ್ನು ಒಳಗೊಂಡಿರುವುದಾಗಿ ಪರಿಗಣಿಸಿರುತ್ತದೆ. ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತ ಕುಟುಂಬಗಳು ಮತ್ತು ಇತರ ಪಾಲ್ಗೊಳ್ಳುವವರನ್ನು ಭದ್ರತೆಯ ಹಿತಾಸಕ್ತಿ ಯಿಂದ ಸಮಾರಂಭದಲ್ಲಿ ಬೆಂಗಳೂರು ಪೊಲೀಸ್ ಆಹ್ವಾನಿಸಿದರು. ನಾವು ಪೊಲೀಸರೊಂದಿಗೆ ಈ ಘಟನೆಯ ವೀಡಿಯೊ ತುಣುಕನ್ನು ಹಂಚಿಕೊಂಡಿದ್ದೇವೆ.
ಭಾರತದ ಸರ್ವೋಚ್ಚ ನ್ಯಾಯಾಲಯ ಬಿಹಾರದ ವಿರುದ್ಧ ಕೇದಾರ್‌ನಾಥ್‌ಸಿಂಗ್ ಸಂದರ್ಭದಲ್ಲಿ ಭಾಷಣ ಹಿಂಸೆಯಿಂದ ಅಥವಾ ಸಾರ್ವಜನಿಕ ಅಸ್ವಸ್ಥತೆ ಚಿತಾವಣೆಗೆ ಒಳಗೊಂಡಿರುವ ದೇಶದ್ರೋಹದ ಮಟ್ಟಿಗೆ ಮಾತ್ರ ಎಂದು ಆದೇಶ ನೀಡಿದೆ. ನ್ಯಾಯಾಲಯದ ತೀರ್ಪು: ‘‘(ಸಿ) ಸಾರ್ವಜನಿಕ ಕ್ರಮಗಳನ್ನು ಅಥವಾ ಸರಕಾರದ ಕ್ರಮದ ಬಗ್ಗೆ ವಿಮರ್ಶಾತ್ಮಕವಾಗಿ ನ್ಯಾಯಸಮ್ಮತ ಮಿತಿಗಳನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಮೂಲಭೂತ ಹಕ್ಕು ಸ್ಥಿರವಾಗಿದೆ ಎಂದಿದೆ.’’
ಶ್ರೇಯಾ ಸಿಂಘಾಲ್ ಮತ್ತು ಭಾರತ ಒಕ್ಕೂಟದ ವಿರುದ್ಧ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ‘‘ಚರ್ಚೆ ಅಥವಾ ಜನಪ್ರಿಯವಲ್ಲದ ಒಂದು ನಿರ್ದಿಷ್ಟ ಕಾರಣದ ಪರವಾಗಿ ವಕಾಲತ್ತಿನ (ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು) ಹಕ್ಕಿದೆ. ಇಂತಹ ಚರ್ಚೆ ಅಥವಾ ವಕಾಲತ್ತು ಚಿತಾವಣೆ ಮಟ್ಟವನ್ನು ತಲುಪಿದಾಗ ಮಾತ್ರ ನಿರ್ಬಂಧಿಸಲಾಗುತ್ತದೆ’’ ಎಂದು ಹೇಳಿದೆ.







