ಬೆಳ್ತಂಗಡಿ: ನಾಲ್ಕು ಗ್ರಾಪಂ ಸ್ಥಾನಗಳಿಗೆ ಮರುಮತದಾನ
ಬೆಳ್ತಂಗಡಿ, ಆ.16: ತಾಲೂಕಿನಲ್ಲಿ ವಿವಿಧ ಕಾರಣ ಗಳಿಗೆ ತೆರವಾಗಿರುವ ನಾಲ್ಕು ಗ್ರಾಪಂ ಸ್ಥಾನಗಳಿಗೆ ಆ.28ರಂದು ಮರು ಮತದಾನ ನಡೆಯಲಿದೆ.
ಧರ್ಮಸ್ಥಳ, ನಡ, ಶಿಬಾಜೆ ಹಾಗೂ ಉಜಿರೆ ಗ್ರಾಪಂಗಳ ತಲಾ ಒಂದು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಮಂಗಳವಾರದಿಂದ ಆರಂಭಗೊಂಡಿದೆ. ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಸಲು ಆ.19 ಕೊನೆಯ ದಿನವಾಗಿದೆ. ಆ.20ರಂದು ಪರಿಶೀಲನೆ ನಡೆಯಲಿದ್ದು, ಆ.22ರಂದು ನಾಮಪತ್ರ ಹಿಂದೆಗೆಯಲು ಕೊನೆಯ ದಿನವಾಗಿದೆ. ಆ.31ರಂದು ಮತಎಣಿಕೆ ನಡೆಯಲಿದೆ.
Next Story