ಕೌಶಲ್ಯಾಭಿವೃದ್ಧಿ ತರಬೇತಿ
ಮಂಗಳೂರು, ಆ.16: 2016-17ನೆ ಸಾಲಿಗೆ ತಾಂತ್ರಿಕ ಸಂಸ್ಥೆಗಳಿಗೆ ತರಬೇತಿಗಾಗಿ ನೆರವು ಯೋಜನೆಯಡಿ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಹ ಅಭ್ಯಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸಿ.ಎನ್.ಸಿ ಮಿಲ್ಲಿಂಗ್/ ಟರ್ನಿಂಗ್, ಮಾಸ್ಟರ್ ಕ್ಯಾಡ್/ಕ್ಯಾಮ್, ಸಿ.ಎನ್.ಸಿ. ಟೆಕ್ನಾಲಜಿ, ವೃತ್ತಿ ತರಬೇತಿಗಳನ್ನು ನೀಡಲಿದ್ದು, ಅಭ್ಯರ್ಥಿಯು 18ರಿಂದ 45 ವರ್ಷದೊಳಗಿರಬೇಕು. ಎಸೆಸೆಲ್ಸಿ ಉತ್ತೀರ್ಣರಾಗಬೇಕು, ತರಬೇತಿಯು ಜಿ.ಟಿ.ಟಿ.ಸಿ ಮಂಗಳೂರು ಇಲ್ಲಿ ನಡೆಯಲಿದೆ.
ಅರ್ಜಿಗಳನ್ನು ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಇಂಡಸ್ಟ್ರಿಯಲ್ ಎಸ್ಟೇಟ್, ಎಯ್ಯೂಡಿ, ದೂ. ಸಂಖ್ಯೆ: 2214021 ಮಂಗಳೂರು ಇವರಿಗೆ ಆ.25ರೊಳಗೆ ತಲುಪುವಂತೆ ನಿಗದಿತ ನಮೂನೆಯಲ್ಲಿ ಕಳುಹಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ, ಜಂಟಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.
Next Story