ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ: ಇಬ್ಬರು ಯೋಧರು , ಓರ್ವ ಪೊಲೀಸ್ ಸಿಬ್ಬಂದಿಯ ಹತ್ಯೆ
ಶ್ರೀನಗರ, ಆ.17: ಗಲಭೆ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಕಂಡು ಬಂದಿದ್ದು, ಇಬ್ಬರು ಯೋಧರನ್ನು ಮತ್ತು ಓರ್ವ ಪೊಲೀಸ್ ಸಿಬ್ಬಂದಿಯನ್ನು ಹತ್ಯೆಗೈದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಖ್ವಾಜಾಬಾಗ್ ನಲ್ಲಿ ರಾತ್ರಿ ಸುಮಾರು2.30ರ ಸಮಯದಲ್ಲಿ ಸೇನಾಪಡೆಯ ವಾಹನದ ಮೇಲೆ ದಿಢೀರ್ ದಾಳಿ ನಡೆಸಿದ ಉಗ್ರು ಇಬ್ಬರು ಯೋಧರನ್ನು ಹತ್ಯೆ ಮಾಡಿದರು. ಇಬ್ಬರು ಯೋಧರು ಈ ಪ್ರಕರಣದಲ್ಲಿ ಗಾಯಗೊಂಡರು. ಬಳಿಕ ಪೊಲೀಸರ ಮೇಲೂ ದಾಳಿ ನಡೆಸಿದ ಪರಿಣಾಮವಾಗಿ ಪೊಲೀಸ್ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟರು, ಇಬ್ಬರು ಗಾಯಗೊಂಡರು.
ಈ ಘಟನೆಯ ಬಳಿಕ ಖ್ವಾಜಾಭಾಗ್ ಪ್ರದೇಶವನ್ನು ಸುತ್ತುವರಿದಿರುವ ಸೇನಾಪಡೆಗಳು ಅವಿತಿರುವ ಉಗ್ರರಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
Next Story