ಮಚ್ಚಂಪಾಡಿ: ಎಸ್ಕೆಎಸ್ಸೆಸ್ಸೆಫ್‌ನಿಂದ ಆ.28ರಂದು ಮಾದಕದ್ರವ್ಯ ವಿರುದ್ಧ ಅಭಿಯಾನ
ಮಂಜೇಶ್ವರ, ಆ.17: ಎಸ್ಕೆಎಸ್ಸೆಸ್ಸೆಫ್‌ಮಚ್ಚಂಪಾಡಿ ಶಾಖೆಯ ವತಿಯಿಂದ ಮಾದಕ ದ್ರವ್ಯದ ವಿರುದ್ಧ ಅಭಿಯಾನ ಕಾರ್ಯಕ್ರಮ ಅ.28 ರಂದು ಸಂಜೆ 4:30 ರಿಂದ ಮಚ್ಚಂಪಾಡಿ ಸಿ.ಎಚ್.ನಗರದಲ್ಲಿ ನಡೆಯಲಿದೆ.
ಅಝೀಝ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಉದ್ಗಾಟಿಸುವರು. ಮಂಜೇಶ್ವರ ಶಾಸಕ ಪಿ.ಬಿ. ಅಬ್ದುರ್ರಝಾಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಕ್ಸೈಸ್ ಇನ್ಸ್‌ಪೆಕ್ಟರ್ ಎಂ.ವಿ. ಬಾಬುರಾಜ್, ಮಂಜೇಶ್ವರ ಎಸ್ಸೈ ಪ್ರಮೋದ್, ಡಾ.ಮುರಲಿ ಮೋಹನ್ ವಿಷಯ ಮಂಡಿಸುವರು. ಅನ್ವರ್ ಅಲೀ ಹುದವಿ ಮಲಪ್ಪುರಂ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಗ್ರಾಮ ಪಂಚಾಯತ್ ಅಧ್ಯಕ್ಷ ಅಝೀಝ್ ಹಾಜಿ, ಮಜೀದ್ ವರ್ಕಾಡಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





