ಅಮೆರಿಕ: 14,000 ಉದ್ಯೋಗಿಗಳನ್ನು ಕೈಬಿಡಲಿರುವ ಸಿಸ್ಕೊ ಸಿಸ್ಟಮ್ಸ್ !
.jpg)
ಕ್ಯಾಲಿಪೋರ್ನಿಯ,ಆ.17: ನೆಟ್‌ವರ್ಕ್ ಉತ್ಪನ್ನ ನಿರ್ಮಾಣ ಕಂಪೆನಿಯಾದ ಸಿಸ್ಕೊ ಸಿಸ್ಟಮ್ಸ್ 14,000 ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ.
ಇದಕ್ಕೆ ಸಂಬಂಧಿಸಿದ ವಿವರಗಳನ್ನು ಕೂಡಲೇ ಬಹಿರಂಗಪಡಿಸಲಾಗುವುದು ಎಂದು ಟೆಕ್ ನ್ಯೂಸ್ ಸೈಟ್ ಸಿಆರ್‌ಎನ್ ವರದಿ ತಿಳಿಸಿದೆ.
ಅದೇವೇಳೆ, 70,000ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗುತ್ತದೆ ಎಂಬ ಸುದ್ದಿಯಾಗಿದ್ದು ಇದನ್ನು ಕಂಪೆನಿ ಅಧಿಕಾರಿಗಳು ದೃಢಪಡಿಸಿಲ್ಲ. ಕ್ಯಾಲಿಪೋರ್ನಿಯದ ಸನ್‌ಜೋಸ್‌ನಲ್ಲಿ ಸಿಸ್ಕೊದ ಕೇಂದ್ರ ಕಚೇರಿಯಿದೆ.
ಮೈಕ್ರೊಸಾಫ್ಟ್ ಕಾರ್ಪೊರೇಶನ್ ಮತ್ತು ಎಚ್‌ಪಿ ಕಂಪೆನಿಗಳು ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತಗೊಳಿಸಲಾಗುವುದೆಂದು ಈ ಮೊದಲೇ ಘೋಷಿಸಿವೆ.
ಮುಂದಿನ ಹನ್ನೆರಡು ತಿಂಗಳುಗಳಲ್ಲಿ 2,850 ಮಂದಿಯನ್ನು ಮೈಕ್ರೊಸಾಫ್ಟ್ ಕೆಲಸದಿಂದ ತೆಗೆಯಲಿದೆ. ಒಟ್ಟು 4,700 ಮಂದಿಯನ್ನು ಕೆಲಸದಿಂದ ಬಿಡುಗಡೆಗೊಳಿಸಲು ಕಂಪೆನಿ ನಿರ್ಧರಿಸಿದೆ ಎನ್ನಲಾಗಿದ್ದು, ಈ ಕಂಪೆನಿಯಲ್ಲಿ ಶೇ.4ರಷ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಆಗಲಿದೆ. ಎಚ್‌ಪಿ ಕಂಪೆನಿ 2016 ಆರ್ಥಿಕ ವರ್ಷ ಕೊನೆಯಾಗುವುದರೊಳಗೆ 3,000 ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆಗೊಳಿಸಲಿದೆ ಎಂದು ಹೇಳಿಕೊಂಡಿದೆ ಎಂದು ವರದಿಯಾಗಿದೆ.







