Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಯುಎಇಗೆ ಒಲಿಂಪಿಕ್ಸ್ ಪದಕ ಗೆದ್ದು ಕೊಟ್ಟ...

ಯುಎಇಗೆ ಒಲಿಂಪಿಕ್ಸ್ ಪದಕ ಗೆದ್ದು ಕೊಟ್ಟ ಯುರೋಪಿಯನ್ ದೇಶದ ಅಥ್ಲೀಟ್!

ವಾರ್ತಾಭಾರತಿವಾರ್ತಾಭಾರತಿ17 Aug 2016 5:03 PM IST
share
ಯುಎಇಗೆ ಒಲಿಂಪಿಕ್ಸ್ ಪದಕ ಗೆದ್ದು ಕೊಟ್ಟ ಯುರೋಪಿಯನ್ ದೇಶದ ಅಥ್ಲೀಟ್!

ರಿಯೋ ಒಲಿಂಪಿಕ್ಸ್ ನಲ್ಲಿ ಯುಎಇಗೆ ಎರಡನೇ ಪದಕವನ್ನು ಗೆದ್ದುಕೊಟ್ಟ ಅಥ್ಲೀಟ್ ವಿದೇಶಿ ಮೂಲದವರು ಎನ್ನುವ ಸುದ್ದಿಯೇ ಸಾಮಾಜಿಕ ತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನು ಯುಎಇ ರಾಷ್ಟ್ರೀಯ ಸಾಧನೆಯೆಂದು ಹೇಳಿಕೊಳ್ಳಬೇಕೇ ಬೇಡವೇ ಎನ್ನುವುದೇ ಚರ್ಚೆಯ ಮೂಲ. ಕೆಲವರಂತೂ ಒಲಿಂಪಿಕ್ಸ್ ಪದಕ ಪಡೆಯಲೆಂದೇ ವಿದೇಶಿಯರಿಗೆ ಯುಎಇ ಪೌರತ್ವ ನೀಡಬೇಕೆಂದೂ ಅಭಿಪ್ರಾಯಪಟ್ಟಿದ್ದಾರೆ.

ಕಂಚಿನ ಪದಕ ಗೆದ್ದ ಜುಡುಕಾ ಸರ್ಗಿಯು ಟೋಮಾ ಮೂಲತಃ ಮೋಲ್ಡಾವ ನಿವಾಸಿ. ಯುಎಇ ಈ ಬಾರಿ 13 ಮಂದಿಯ ತಂಡವನ್ನು ಒಲಿಂಪಿಕ್ಸ್ ಗೆ ಕಳುಹಿಸಿದ್ದು, ಅದರಲ್ಲಿ ಆರು ಮಂದಿ ವಿದೇಶಿಯರಿದ್ದರು. ಟೋಮಾ ವಿದೇಶಿಯನಾಗಿದ್ದರೂ ಈ ಸಾಧನೆ ಯುಎಇಗೆ ದೊಡ್ಡದು ಎಂದು ಮಾಧ್ಯಮವೊಂದು ವರದಿ ಮಾಡಿದ್ದನ್ನು ದುಬೈ ಉಪ ಪೊಲೀಸ್ ಮುಖ್ಯಸ್ಥ ಮತ್ತು ಭದ್ರತಾ ಪ್ರಧಾನರಾದ ಲೆಫ್ಟಿನಂಟ್ ಜನರಲ್ ದಹಿ ಖಾಲ್ಫನ್ ತಮೀಮ್ ಟೀಕಿಸಿದ್ದಾರೆ.

ಲೇಖನ ಬರೆದ ಇಮ್ರತ್ ಅಲ್ ಯೋಮ್ ಪತ್ರಿಕೆಯ ಸಂಪಾದಕರಾದ ಸಾಮಿ ಅಲ್ ರೆಯಾಮಿ ಅವರು ಹೀಗೆ ಪ್ರತಿಭಾನ್ವಿತ ವಿದೇಶಿಯರಿಗೆ ಪೌರತ್ವ ನೀಡುವ ಪರವಾಗಿ ವಾದಿಸಿದ್ದಾರೆ. ಅವರು ಒಲಿಂಪಿಕ್ಸ್ ಚಾಂಪಿಯನ್ನರು. ಯುಎಇ ಮತ್ತು ಅರಬರಿಗೆ ಒಲಿಂಪಿಕ್ಸ್ ಪದಕ ಉಡುಗೊರೆಯಾಗಿ ಕೊಟ್ಟಿದ್ದಾರೆ. ನೂರಾರು ಮಂದಿಯ ಮುಂದೆ ಯುಎಇ ಧ್ವಜ ಹಾರಿಸಿದ್ದಾರೆ, ರಾಷ್ಟ್ರಗೀತೆ ಹಾಡಿದ್ದಾರೆ. ಇಡೀ ಜಗತ್ತೇ ಯುಎಇಗೆ ಬಂದ ಪದಕ ನೋಡಿದೆ ಎಂದು ರೆಯಾಮಿ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ದಹಿ ಟ್ವೀಟ್ ಮಾಡಿ, ಟೋಮಾ ಸಾಧನೆಗೆ ಬಹಳಷ್ಟು ಮಂದಿ ಖುಷಿಪಡುತ್ತಿದ್ದಾರೆ. ಆದರೆ ನಮ್ಮ ದೇಶದ ಮಕ್ಕಳು ಪದಕ ಗೆಲ್ಲುವವರೆಗೆ ಅದು ನಮ್ಮದೆಂದು ನನಗೆ ಅನಿಸುವುದಿಲ್ಲ ಎಂದು ಹೇಳಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, ಇದೇ ಹೆಮ್ಮೆಯ ವಿಷಯವಾಗಿದ್ದಲ್ಲಿ ಎಲ್ಲಾ ಉತ್ತಮ ವಿದೇಶಿ ಆಟಗಾರನಿಗೆ ಯುಎಇ ಪೌರತ್ವ ಕೊಟ್ಟು ಎಲ್ಲಾ ಪದಕಗಳನ್ನೂ ನಾವೇ ಗೆಲ್ಲಬಹುದಲ್ಲವೆ ಎಂದೂ ದಹಿ ಹೇಳಿದ್ದಾರೆ. ದಹಿ ಅವರ ಟ್ವೀಟ್ ಎಮಿರೇಟ್ಸ್ ಮತ್ತು ಅರಬರ ನಡುವೆ ಚರ್ಚೆಗೆ ಕಾರಣವಾಗಿದೆ. ಹಲವರು ದಹಿಯನ್ನು ಬೆಂಬಲಿಸಿದರೆ, ಇನ್ನು ಕೆಲವರು ಟೋಮಾ ಮೂಲ ಯಾವುದೇ ಇದ್ದರೂ, ಆತ ಎಮಿರೇಟ್ಸಿಗೆ ಸೇರಿದವರು ಎಂದೇ ಹೇಳಿದ್ದಾರೆ.

ಆದರೆ ದೇಶೀ ಆಟಗಾರರ ಸಾಧನೆಯೇ ಎಮಿರೇಟ್ಸಿಗೆ ಹೆಮ್ಮೆ ಕೊಡಲಿದೆಯೇ ವಿನಾ ವಿದೇಶಿಗನ ಸಾಧನೆಯಲ್ಲ ಎಂದು ದಹಿ ಹೇಳಿದ್ದಾರೆ. ಕುವೈತ್ ಮತ್ತು ಕತಾರ್ ಕೂಡ ಒಲಿಂಪಿಕ್ಸಿಗೆ ವಿದೇಶಿಗರನ್ನು ಕಳುಹಿಸಿಕೊಡುತ್ತದೆ. 3000 ಮೀಟರ್ ಮಹಿಳಾ ಸ್ಟೀಪಲ್ ಚೇಸಲ್ಲಿ ಚಿನ್ನ ಗೆದ್ದ ಬಹರೈನಿನ ರುತ್ ಜೇಬೆಟ್ ಮೂಲತಃ ಕೀನ್ಯಾ ಸಂಜಾತರು. ಇದು ಎಮಿರೇಟಿ ಅಥವಾ ವಿದೇಶಿಗನ ಪ್ರತಿಭೆ ಎಂದು ನೋಡಬಾರದು. ನಮ್ಮಲ್ಲಿ ಯುವಕರನ್ನು ತರಬೇತಿ ನೀಡುವ ವ್ಯವಸ್ಥೆಯಿದೆ ಎಂದುಕೊಳ್ಳಬೇಕು ಎನ್ನುವುದು ಮೊಹಮ್ಮದ್ ಅಲ್ ಹಶೇಮಿ ಅಭಿಪ್ರಾಯ. 300 ದಶಲಕ್ಷ ಪ್ರಜೆಗಳಿದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಅಥ್ಲೀಟ್ ಗಳು ಅರಬ್ ದೇಶಗಳಲ್ಲಿ ಏಕಿಲ್ಲ ಎನ್ನುವುದೇ ಪ್ರಶ್ನೆ ಎಂದು ಅಬ್ದುಲ್ಲಾ ರಶೀದ್ ಹೇಳಿದ್ದಾರೆ. ರಾಜಕೀಯ ಶಾಸ್ತ್ರದ ಪ್ರೊಫೆಸರ್ ಆಗಿರುವ ಅಬ್ದುಲ್ಖಾಲೇಕ್ ಅಬ್ದುಲ್ಲ ಕೂಡ ಚರ್ಚೆಯಲ್ಲಿ ಭಾಗವಹಿಸಿ, ಬಡ ದೇಶ ಜಮೈಕದಲ್ಲಿ ಪ್ರತಿಭಾನ್ವಿತ ಓಟಗಾರರು ಇದ್ದಾರೆಂದಾದಲ್ಲಿ ಯುಎಇ ಮತ್ತು ಎಮಿರೇಟ್ಸ್ ದೇಶಗಳಲ್ಲಿ ಏಕೆ ಈಜುಗಾರರು ಮತ್ತು ಓಟಗಾರರಿಲ್ಲ? ಎಂದು ಪ್ರಶ್ನಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X