ಆಗಸ್ಟ್ 23ರಂದು 27 ಕೋಟಿ ವಿದ್ಯಾರ್ಥಿಗಳಿಂದ ಸಾಮೂಹಿಕ ರಾಷ್ಟ್ರ ಗೀತೆ: ಜಾವೇಡ್‌ಕರ್
.jpg)
ಗೋರಕ್‌ಪುರ,ಆ.17: " ದೇಶದ ಮಹಾನ್ ಸ್ವಾತಂತ್ರ್ಯ ಯೋಧರುಮತ್ತು ಕ್ರಾಂತಿಕಾರಿಗಳ ಗೌರವ ಭಾವನೆ ಬೆಳೆಸಲಿಕ್ಕಾಗಿ ಮತ್ತು ರಾಷ್ಟ್ರಭಕ್ತಿಯ ಭಾವನೆ ಸೃಷ್ಟಿಸಲಿಕ್ಕಾಗಿ ಕಳೆದ ಆಗಸ್ಟ್ ಒಂಬತ್ತಕ್ಕೆ ಪ್ರಾರಂಭಿಸಲಾದ ತಿರಂಗಾ ಯಾತ್ರೆ ಸಮಾಪನಾ ಸಂದರ್ಭದಲ್ಲಿ 27 ಕೋಟಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಏಕ ಸಮಯದಲ್ಲಿ ಸಾಮೂಹಿಕ ರಾಷ್ಟ್ರಗೀತೆಯನ್ನು ಆಲಾಪಿಸಲಿದ್ದಾರೆ" ಎಂದು ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಪ್ರಕಾಶ್ ಜಾವೇಡ್‌ಕರ್ ಹೇಳಿದ್ದಾರೆಂದು ವರದಿಯಾಗಿದೆ.
ಗೋರಕ್‌ಪುರದ ಪ.ರಾಮ್ ಪ್ರಸಾದ್ ಬಿಸ್ಲಮ್ ಸ್ಮಾರಕದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನುಉದ್ದೇಶಿಸಿ ಅವರು ಮಾತಾಡುತ್ತಿದ್ದರು. "ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಮೇಲೆ ಆಚರಿಸಲಾಗುತ್ತಿರುವ ಎಪ್ಪತ್ತನೆ ಸ್ವಾತಂತ್ರ್ಯೋತ್ಸವವನ್ನು ದೇಶದ 125 ಕೋಟಿ ನಾಗರಿಕರಿಗಾಗಿ ಸ್ಮರಣೀಯ ಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿ ತಿರಂಗಾ ಯಾತ್ರಾಕ್ಕೆ ಚಾಲನೆ ನೀಡಿದ್ದರು. ಆಗಸ್ಟ್ ಒಂಬತ್ತರಂದು ದೇಶದ ಮಹಾನ್ ಸ್ವತಂತ್ರ ಸಂಗ್ರಾಮ ಸೇನಾನಿಗಳು, ಕ್ರಾಂತಿಕಾರಿಗಳ ಕುರಿತು ಗೌರವಾದರ ಬೆಳೆಸಲು ಮತ್ತು ರಾಷ್ಟ್ರಭಕ್ತಿ ಭಾವನೆಯನ್ನು ಜನಮನದಲ್ಲಿ ಬೆಳೆಸುವ ಉದ್ದೇಶದಿಂದ ತಿರಂಗಾಯಾತ್ರಾವನ್ನು ಆರಂಭಿಸಲಾಯಿತು. ಈ ಯಾತ್ರೆಯು ಆಗಸ್ಟ್ 23ರಂದು ಸಮಾಪನಗೊಳ್ಳಲಿದ್ದು, ಅಂದು ದೇಶದ ಸಾವಿರಾರು ಶಾಲೆ,ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ 700 ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಹಿತ ಒಟ್ಟು 27 ಕೋಟಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪೂರ್ವಾಹ್ನ ಸಾಮೂಹಿಕ ರಾಷ್ಟ್ರ ಗೀತೆ ಜೊತೆಯಾಗಿ ಹಾಡಲಿದ್ದಾರೆ. ದೇಶದ ಮಹಾನ್ ಸ್ವಾತಂತ್ರ್ಯ ಸೇನಾನಿಗಳು ಮತ್ತು ಕ್ರಾಂತಿಕಾರಿಗಳಿಗೆ ಆ ಮೂಲಕ ಮಕ್ಕಳು ಗೌರವ ಸಲ್ಲಿಸಲಿದ್ದಾರೆ ಎಂದು ಜಾವೇಡ್‌ಕರ್ ಪ್ರಕಟಿಸಿದ್ದಾರೆಂದು ವರದಿ ತಿಳಿಸಿದೆ.





