ಸುಳ್ಯ: ನಗರ ಪಂಚಾಯತ್ ಅಧಿಕಾರಿಗಳಿಂದ ಅಂಗಡಿಗಳಿಗೆ ದಾಳಿ
ಸುಳ್ಯ, ಆ.17: ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ಕೈಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಗಡಿಯೊಂದರಲ್ಲಿ ಪ್ಲಾಸ್ಟಿಕ್ ಕೈಚೀಲ ಮತ್ತು ಪ್ಲಾಸ್ಟಿಕ್ ಗ್ಲಾಸ್‌ಗಳನ್ನು ವಶಕ್ಕೆ ಪಡೆದ ಸಂದರ್ಭ ಅಂಗಡಿ ಮಾಲಕರಿಗೂ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಪ್ಲಾಸ್ಟಿಕ್ ಕೈಚೀಲ, ಗ್ಲಾಸ್‌ಗಳನ್ನು ವಶಪಡಿಸಿಕೊಂಡರೆ ಸಾಲದು, ಅದರ ತಯಾರಿಕೆಯನ್ನು ಮೊದಲು ನಿಲ್ಲಿಸಬೇಕು ಎಂದು ಅಂಗಡಿ ಮಾಲಕರು ಹೇಳಿದ್ದು, ಬಳಿಕ ಸಮಾಧಾನಗೊಂಡ ಅಧಿಕಾರಿ ಕಂಪೆನಿಗೆ ಹಿಂದಿರುಗಿಸುವ ಭರವಸೆ ಮೇರೆಗೆ ಗ್ಲಾಸ್‌ಗಳನ್ನು ಅಂಗಡಿಯವರಿಗೆ ಹಿಂದಕ್ಕೆ ನೀಡಲು ನೌಕರರಿಗೆ ಸೂಚಿಸಿದರು.
Next Story





