ಅಮೆಮಾರ್ ಸರಕಾರಿ ಶಾಲೆಗೆ ಶಿಕ್ಷಕರ ಮರು ನೇಮಕ
ಫಲ ನೀಡಿದ ವಿದ್ಯಾರ್ಥಿ-ಪೋಷಕರ ಪ್ರತಿಭಟನೆ

ಬಂಟ್ವಾಳ, ಆ.17: ತಾಲೂಕಿನ ಪುದು ಗ್ರಾಮದ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು ವರ್ಗಾಯಿಸಿದ ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಗೆ ಬೀಗ ಜಡಿದು ನಡೆಸಿದ್ದ ಪ್ರತಿಭಟನೆ ಕೊನೆಗೂ ಫಲ ನೀಡಿದೆ. ಎರಡು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಶಿಕ್ಷಣಾಧಿಕಾರಿ ತೆರೆ ಎಳೆದಿದ್ದಾರೆ.
ಇಬ್ಬರು ಶಿಕ್ಷಕರ ಪೈಕಿ ಓರ್ವ ಶಿಕ್ಷಕರನ್ನು ಈಗಾಗಲೇ ವರ್ಗಾಯಿಸಲಾಗಿದ್ದು, ಶಿಕ್ಷಕರ ಕೊರತೆ ನೀಗಿಸುವಂತೆ ಆಗ್ರಹಿಸಿ ಎರಡು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಸ್ಪಂದಿಸಿದ ಶಿಕ್ಷಣಾಧಿಕಾರಿ ಡೆಪ್ಯುಟೇಷನ್ ಮೂಲಕ ಬೇರೆ ಕಡೆಯಿಂದ ಶಿಕ್ಷಕರನ್ನು ಶಾಲೆಗೆ ನೇಮಕ ಮಾಡಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಲೈಮಾನ್ ತಿಳಿಸಿದ್ದಾರೆ.
Next Story





