ಜಲಾಶಯಗಳಲ್ಲಿನ ನೀರು ಕುಡಿಯಲು ಮಾತ್ರ ಬಳಕೆ :ಸಂಪುಟ ಸಭೆ ನಿರ್ಧಾರ
ರಾಜ್ಯದಲ್ಲಿ ಈ ವರ್ಷವೂ ಆವರಿಸಲಿರುವ ಬರದ ಛಾಯೆ

ಬೆಂಗಳೂರು, ಆ.17: ರಾಜ್ಯದಲ್ಲಿ ಮುಂಗಾರು ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಈ ವರ್ಷವೂ ಬರದ ಛಾಯೆ ಆವರಿಸುವುದು ಸ್ಪಷ್ಟವಾಗಿದೆ. ಆದುದರಿಂದ, ಜಲಾಶಯಗಳಲ್ಲಿ ಸಂಗ್ರಹವಿರುವ ನೀರನ್ನು ಕೇವಲ ಕುಡಿಯಲು ಮಾತ್ರ ಬಳಕೆ ಮಾಡಿಕೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾದ ಹಿನ್ನೆಲೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ಮಾತ್ರ ಭರ್ತಿಯಾಗಿವೆ. ಆದುದರಿಂದ, ಸರಕಾರವು ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳುವಂತೆ ಆದೇಶ ಹೊರಡಿಸುವಾಗ ಈ ಎರಡು ಜಲಾಶಯ ಗಳಿಗೆ ವಿನಾಯಿತಿ ನೀಡಲಿದೆ ಎಂದು ಜಯಚಂದ್ರ ಹೇಳಿದರು.
Next Story





