ನಾಡದೋಣಿ ಮಗುಚಿ ಮೀನುಗಾರ ಮೃತ್ಯು
ಮಲ್ಪೆ, ಆ.17: ತೊಟ್ಟಂ ಪಂಡರಿನಾಥ ಭಜನಾ ಮಂದಿರ ಬಳಿ ಕೈರಂಪಣಿ ನಾಡದೋಣಿ ಮಗುಚಿ ಮೀನುಗಾರರೊಬ್ಬರು ಬುಧವಾರ ಮೃತಪಟ್ಟಿದ್ದಾರೆ.
ಬಡಾನಿಡಿಯೂರು ಗ್ರಾಮ ತೊಟ್ಟಂ ಬೊಬ್ಬರ್ಯಕಟ್ಟೆ ಶೇಖರ ಕುಂದರ್(58) ಮೃತಪಟ್ಟವರು. ಅವರು ಜನಾರ್ದನ ತಿಂಗಳಾಯ ಅವರಿಗೆ ಸೇರಿದ ಜಾಹ್ನವಿ ದೋಣಿಯಲ್ಲಿ ಬುಧವಾರ ಪ್ರವೀಣ್, ಕೃಷ್ಣಪ್ಪ, ಶಂಭು, ಸೂರ್ಯ, ಭಾಸ್ಕರ ಎಂಬವರ ಜತೆಗೆ ಮೀನುಗಾರಿಕೆಗೆ ತೆರಳಿದ್ದಾರೆ. ದೋಣಿ ಗಾಳಿ ಮತ್ತು ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದೆ. ಎಲ್ಲರೂ ಈಜಿ ದಡ ಸೇರಿದ್ದು, ಶೇಖರ ಕುಂದರ್ ಅವರನ್ನು ಮೇಲೆತ್ತಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
Next Story





