ಎಸ್‌ಡಿಪಿಐ: ತಾಲೂಕು ಆಸ್ಪತ್ರೆ ಶವಾಗಾರ ಪರಿಸರದಲ್ಲಿ ಶ್ರಮದಾನ
ಸುಳ್ಯ, ಆ.17: ಎಸ್‌ಡಿಪಿಐ ಸುಳ್ಯ ನಗರ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಂಗಳವಾರ ಸುಳ್ಯದ ತಾಲೂಕು ಆಸ್ಪತ್ರೆ ಶವಾಗಾರ ಪರಿಸರದಲ್ಲಿ ಶ್ರಮದಾನ ನಡೆಯಿತು.
ಶವಾಗಾರದ ಸುತ್ತಮುತ್ತ ಇದ್ದ ಪೊದೆಗಳನ್ನು ಕಡಿದು ಸ್ವಚ್ಛ ಮಾಡಲಾಯಿತು. ಶವಾಗಾರ ಕಟ್ಟಡಕ್ಕೆ ಪೈಂಟಿಂಗ್ ಮಾಡಲಾಯಿತು. ಮರಣೋತ್ತರ ಪರೀಕ್ಷೆಯ ಕಿಟ್‌ನ್ನು ಕೊಡುಗೆಯಾಗಿ ನೀಡಲಾಯಿತು. ವೈದ್ಯಾಧಿಕಾರಿ ಡಾ.ಕರುಣಾಕರ, ಡಿ ದರ್ಜೆ ಸಿಬ್ಬಂದಿ ಹುಕ್ರಪ್ಪಕಿಟ್‌ನ್ನು ಸ್ವೀಕರಿಸಿದರು.
ಎಸ್‌ಡಿಪಿಐ ವತಿಯಿಂದ ಶವಾಗಾರದ ಎದುರು ಶೆಡ್ ನಿರ್ಮಿಸಿಕೊಡುವುದಾಗಿ ನಪಂ ಸದಸ್ಯ ಕೆ.ಎಸ್.ಉಮರ್ ಹೇಳಿದರು. ಎಸ್‌ಡಿಪಿಐ ನಗರ ಸಮಿತಿ ಅಧ್ಯಕ್ಷ ಅಬ್ದುಲ್ ಕಲಾಂ, ಕಾರ್ಯದರ್ಶಿ ಸಂಶುದ್ದೀನ್, ಮುಖಂಡರಾದ ಸತ್ತಾರ್ ಸಂಗಂ, ಕಬೀರ್, ಮುಸ್ತಫಾ, ರಫೀಕ್, ಅಬ್ದುಲ್ ರೆಹ್ಮಾನ್, ರಝಾಕ್, ಬಶೀರ್, ಯೂಸುಫ್, ಸಲೀಂ, ಇಕ್ಬಾಲ್, ಲತೀಫ್, ಅಬಿದ್, ಶರೀಫ್ ಮತ್ತಿತರರು ಉಪಸ್ಥಿತರಿದ್ದರು.
Next Story





