ಏಜಿಯನ್ ಸಮುದ್ರದಲ್ಲಿ 59 ವಲಸಿಗರ ರಕ್ಷಣೆ
ಅಥೆನ್ಸ್, ಆ. 17: ಪ್ರಕ್ಷುಬ್ಧ ಏಜಿಯನ್ ಸಮುದ್ರದಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ 59 ವಲಸಿಗರನ್ನು ತಾನು ರಕ್ಷಿಸಿರುವುದಾಗಿ ಗ್ರೀಸ್‌ನ ತಟ ರಕ್ಷಣಾ ಪಡೆ ಹೇಳಿದೆ.
ಕೋಸ್ ದ್ವೀಪದ ಸಮೀಪ ಬುಧವಾರ ಮುಂಜಾನೆ ಎರಡು ಗಸ್ತು ನೌಕೆಗಳು ವಲಸಿಗರನ್ನು ರಕ್ಷಿಸಿದವು. ವಿಶೇಷವಾಗಿ ಸಿರಿಯದ ವಲಸಿಗರು ಸಂಪದ್ಭರಿತ ಯುರೋಪ್‌ನಲ್ಲಿ ಉತ್ತಮ ಬದುಕನ್ನು ಅರಸುತ್ತಾ ಟರ್ಕಿಗೆ ಹತ್ತಿರವಾಗಿರುವ ಗ್ರೀಸ್‌ನ ದ್ವೀಪಗಳ ಮೂಲಕ ಗ್ರೀಸ್ ಪ್ರವೇಶಿಸುತ್ತಾರೆ.
Next Story





