ಐಸಿಸಿ ಟೆಸ್ಟ್ ರ್ಯಾಂಕಿಂಗ್: ಭಾರತ ನಂ.1

ಹೊಸದಿಲ್ಲಿ, ಆ.17: ಕೊಲಂಬೊದಲ್ಲಿ ನಡೆದ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಶ್ರೀಲಂಕಾ ತಂಡ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತ ನಂ.1 ಸ್ಥಾನಕ್ಕೆ ಭಡ್ತಿ ಪಡೆದಿದೆ.
ಪೋರ್ಟ್ ಆಫ್ ಸ್ಪೇನ್‌ನಲ್ಲಿ ಗುರುವಾರ ಆರಂಭವಾಗಲಿರುವ ವೆಸ್ಟ್‌ಇಂಡೀಸ್ ವಿರುದ್ಧದ 4ನೆ ಹಾಗೂ ಅಂತಿಮಟೆಸ್ಟ್ ಪಂದ್ಯವನ್ನು ಜಯಿಸಿ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡರೆ ಭಾರತ 112 ಅಂಕದೊಂದಿಗೆ ನಂ.1 ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು.
ಒಂದು ವೇಳೆ ಡ್ರಾ ಸಾಧಿಸಿದರೆ 110 ಅಂಕಗಳೊಂದಿಗೆ 2ನೆ ಸ್ಥಾನಕ್ಕೆ ಕುಸಿಯಲಿದೆ. ಸೋತರೆ 108 ಅಂಕದೊಂದಿಗೆ 4ನೆ ಸ್ಥಾನಕ್ಕೆ ಕುಸಿಯಲಿದೆ.
ಐಸಿಸಿ ರ್ಯಾಂಕಿಂಗ್: 1. ಭಾರತ, 2.ಪಾಕಿಸ್ತಾನ, 3. ಆಸ್ಟ್ರೇಲಿಯ, 4. ಇಂಗ್ಲೆಂಡ್, 5. ನ್ಯೂಝಿಲೆಂಡ್, 6.ಶ್ರೀಲಂಕಾ, 7. ದಕ್ಷಿಣ ಆಫ್ರಿಕ, 8. ವೆಸ್ಟ್‌ಇಂಡೀಸ್, 9. ಬಾಂಗ್ಲಾದೇಶ, 10. ಝಿಂಬಾಬ್ವೆ.
Next Story





