ಕರಾವಳಿಯ ವಿವಿಧೆಡೆ ಸ್ವಾತಂತ್ರ್ಯೋತ್ಸವ
ಕೆಸಿಎಫ್: ರಿಯಾದ್ ಘಟಕ
ರಿಯಾದ್, ಆ.17: ಕರ್ನಾಟಕ ಕಲ್ಚರ್ ಫೌಂಡೇಶನ್ ರಿಯಾದ್ ಘಟಕದ ವತಿಯಿಂದ ಇಲ್ಲಿನ ಬತ್ತಾದಲ್ಲಿರುವ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಸಿಎಫ್ ರಿಯಾದ್ ವಲಯಾಧ್ಯಕ್ಷ ನಝೀರ್ ಕಾಶಿಪಟ್ಣ ಧ್ವಜಾರೋಹಣಗೈದರು.
ಕೆಸಿಎಫ್ ಪ್ರಾಂತೀಯ ಕಾರ್ಯ ದರ್ಶಿ ಫಾರೂಕ್ ಅಬ್ಬಾಸ್ ಉಳ್ಳಾಲ್, ಮುಸ್ತಫಾ ಸಅದಿ ಸೂರಿಕುಮೇರು, ನವಾಝ್ ಸಖಾಫಿ ಅಡ್ಯಾರ್ ಮತ್ತಿತ ರರು ಉಪಸ್ಥಿತರಿದ್ದರು.
ಪೂಂಜಾಲಕಟ್ಟೆ: ಬುರೂಜ್ ಸ್ಕೂಲ್
ಪೂಂಜಾಲಕಟ್ಟೆ, ಆ.17: ಬುರೂಜ್ ಇಂಗ್ಲಿಷ್ ಮಾಧ್ಯಮ ಹೈಸ್ಕೂಲ್ ರಝಾನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ದಿವಾಕರ ದಾಸ್ ಧ್ವಜಾರೋಹಣಗೈದರು. ನಿವೃತ ಯೋಧ ಲಕ್ಷ್ಮಣ ಪೂಜಾರಿ, ಇರ್ವತ್ತೂರ್ ಮಸೀದಿ ಅಧ್ಯಕ್ಷ ಪಿ.ಕೆ.ಇದಿನಬ್ಬ, ಶಾಲಾ ಸಂಸ್ಥಾಪಕ ಶೇಕ್ ರಹ್ಮತುಲ್ಲಾ, ಜಾರ್ಜ್ ಬುಶ್, ವಸಂತ ಮೂಲ್ಯ, ಗ್ರಾಪಂ ಸದಸ್ಯ ಗಿರಿಜಾ, ಶಾಲಾ ಪೋಷಕರ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಶೆಟ್ಟಿ, ಅಮ್ಜದಿ ಉಸ್ತಾದ್ ಉಪಸ್ಥಿತರಿದ್ದರು.
ಪ್ರಣಾಮ್ ಸುಧಾಕರ್ ಜಯಂತಿ ಸ್ವಾಗತಿಸಿದರು. ಸನಾ ವಂದಿಸಿದರು. ದಿಲ್‌ನಾಝ್ ಕಾರ್ಯಕ್ರಮ ನಿರೂಪಿಸಿದರು.





