ಕೂಡ್ಲಿಗಿಯಲ್ಲಿ ಕಾರು -ಲಾರಿ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು

ಬಳ್ಳಾರಿ, ಆ.18: ಕೂಡ್ಲಿಗಿಯ ಶಿವಪುರದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬುಧವಾರ ತಡರಾತ್ರಿ ಕಾರು ಮತ್ತು ಲಾರಿ ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ವಿಜಯಪುರದ ಸಿಂಧಿಗಿ ಮೂಲದ ಬಸವರಾಜ್, ಕಿರಣ್, ಮಂಜುನಾಥ್ ಮತ್ತು ಸಂಗಮೇಶ್ ಎಂದು ಗುರುತಿಸಲಾಗಿದೆ.
ಕೂಡ್ಲಿಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





