ಬಿಜೆಪಿ ಶಾಸಕ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡುವ ವೀಡಿಯೊ ವೈರಲ್..!

ಮುಂಬೈ, ಆ.18: ಮಹಾರಾಷ್ಟ್ರದಲ್ಲಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕರೊಬ್ಬರು ಪೊಲೀಸ್ ಅಧಿಕಾರಿಯ ಕೆನ್ನೆಗೆ ಹೊಡೆಯುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಬುಧವಾರ ರಾತ್ರಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ಎಂಎಲ್‌ಎ ರಾಮಚಂದ್ರ ಅವಾಸಾರೆ ಪೊಲೀಸ್ ಅಧಿಕಾರಿಯೊಬ್ಬರ ಕೆನ್ನೆಗೆ ಹೊಡೆಯುತ್ತಿರುವ ದೃಶ್ಯದ ವೀಡಿಯೋವನ್ನು ಎಎನ್‌ಐ ಪ್ರಟಿಸಿದೆ.
ಎಂಎಲ್‌ಎ ಹೊಡೆಯುತ್ತಿರುವಾಗ ಅಲ್ಲಿದ ಇನ್ನೊಬ್ಬ ಪೊಲೀಸ್ ಅಧಿಕಾರಿ ಎಂಎಲ್‌ಎಯ ನ್ನು ಸಮಧಾನ ಪಡಿಸಲು ಯತ್ನಿಸುತ್ತಿರುವುದು ವೀಡಿಯೋದಲ್ಲಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರಕಾರ ಅಧಿಕಾರದಲ್ಲಿದೆ. ಪೊಲೀಸ್ ಅಧಿಕಾರಿ ಅವರು ಎಂಎಲ್‌ಎ ವಿರುದ್ಧ ಸರಕಾರಕ್ಕೆ ದೂರು ನೀಡಿದ್ದಾರೆ.
#WATCH Bhandara (Maharashtra): Ramchandra Avasare (BJP MLA) slapped police officer in police station, last nighthttps://t.co/3hJBYVCEjF
— ANI (@ANI_news) 18 August 2016
Next Story







