ಯಾಂಬು: ಐಎಸ್‌ಎಫ್‌ನಿಂದ ಆ.19ರಂದು ‘ಇಂಡಿಪೆಂಡೆನ್ಸ್ ಡೇ ಸ್ಪೋರ್ಟ್ಸ್ ಮೀಟ್’
.jpg)
ಯಾಂಬು, ಆ.18: : ಇಂಡಿಯನ್ ಸೋಶಿಯಲ್ ಫೋರಂ ಸೌದಿಯಾಧ್ಯಂತ ಆಯೋಜಿಸುತ್ತಿರುವ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಯಾಂಬೂ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಆಗಸ್ಟ್ 19 ರಂದು ‘ಇಂಡಿಪೆಂಡೆನ್ಸ್ ಡೇ ಸ್ಪೋರ್ಟ್ಸ್ ಮೀಟ್’ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ದುಡಿಮೆ ಮತ್ತು ವಾಸ್ತವ್ಯ ಕೊಠಡಿಗೆ ಸ್ಥೀಮಿತವಾದ ಅನಿವಾಸಿ ಭಾರತೀಯರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸುವ ನಿಟ್ಟಿನಲ್ಲಿ ಐಎಸ್ಎಫ್ ಇಂತಹ ಅಭಿಯಾನವನ್ನು ಆಯೋಜಿಸುತ್ತಾ ಬರುತ್ತಿದೆ. ಕೂಟದಲ್ಲಿ ಹತ್ತಾರು ಕ್ರೀಡಾಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಅನಿವಾಸಿ ಭಾರತೀಯರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಐಎಸ್‌ಎಫ್‌ನ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





