ಹೊಸಂಗಡಿ: ಮುಸ್ಲಿಂ ಯೂತ್ ಲೀಗ್ ಸಮ್ಮೇಳನಕ್ಕೆ ಧ್ವಜಸ್ತಂಭ ಹಸ್ತಾಂತರ

ಮಂಜೇಶ್ವರ, ಆ.18: ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಸಮ್ಮೇಳನದಂಗವಾಗಿ ಸಮ್ಮೇಳನ ನಗರಕ್ಕೆ ಧ್ವಜಸ್ತಂಭವನ್ನು ಹಸ್ತಾಂತರಿಸಲಾಯಿತು. ಸೈಯದ್ ಹಾದಿಲ್ ತಂಙಳ್ ಜಿಲ್ಲಾ ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ಎ.ಕೆ.ಎಂ. ಅಶ್ರಫ್‌ರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಯೂತ್ ಲೀಗ್ ಮಂಜೇಶ್ವರದ ಮಂಡಲಾಧ್ಯಕ್ಷ ಸೈಯದ್ ಸೈಫುಲ್ಲ ತಂಙಳ್, ಕಾರ್ಯದರ್ಶಿ ಗೋಲ್ಡನ್ ರಹ್ಮಾನ್ ಉಪ್ಪಳ, ಅಬ್ದುಲ್ ಖಾದರ್ ಕುಂಜತ್ತೂರು, ಆರಿಫ್ ಎ.ಕೆ., ಯೂಸುಫ್ ಉಳುವಾರ್, ಝಡ್.ಎ. ಕಯ್ಯಾರ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯ ಮುಸ್ತಫಾ ಉದ್ಯಾವರ, ಅಬ್ದುಲ್ಲ ಕಜೆ ಮೊದಲಾದವರು ಉಪಸ್ಥಿತರಿದ್ದರು.
Next Story





