ಹಫೀಜ್ಹ್ ಸಈದ್ ಇಸ್ಲಾಮ್ ವಿರೋಧಿ ಉಗ್ರ : ಬರೇಲಿ ಮುಫ್ತಿಯಿಂದ ಫತ್ವಾ
ಬರೇಲಿ(ಉ.ಪ್ರ),ಆ.18: ಇಲ್ಲಿಯ ಬರೇಲ್ವಿ ಪಂಥದ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಸಂಸ್ಥೆಯು ಮುಂಬೈ ಭಯೋತ್ಪಾದಕ ದಾಳಿಗಳ ರೂವಾರಿ ಹಾಗೂ ಪಾಕಿಸ್ತಾನದ ಜಮಾತ್-ಉದ್-ದಾವಾದ ಮುಖ್ಯಸ್ಥ ಹಫೀಝ್ ಸಯೀದ್ನನ್ನು ಇಸ್ಲಾಮ್ ವಿರೋಧಿಯೆಂದು ಘೋಷಿಸಿ ಗುರುವಾರ ಆತನ ವಿರುದ್ಧ ಫತ್ವಾ ಹೊರಡಿಸಿದೆ.
ಸಂಸ್ಥೆಯ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸಲೀಂ ಬರೇಲ್ವಿ ಅವರು ಹೊರಡಿಸಿರುವ ಈ ಫತ್ವಾ ಹಫೀಝ್ನನ್ನು ಇಸ್ಲಾಮ್ನಿಂದ ಬಹಿಷ್ಕರಿಸಿದ್ದು,ಆತನನ್ನು ಅನುಸರಿಸುವುದು ಅಥವಾ ಆತನನ್ನು ಮುಸ್ಲಿಮ್ ಎಂದು ಪರಿಗಣಿಸುವುದು ‘ಕಾನೂನು ವಿರುದ್ಧ’ವಾಗುತ್ತದೆ ಎಂದು ಘೋಷಿಸಿದೆ. ಲಷ್ಕರ್-ಎ-ತಯ್ಯಬಾದ ಸ್ಥಾಪಕನಾಗಿರುವ ಹಫೀಝ್ ತನ್ನ ತಲೆಯ ಮೇಲೆ 10 ಮಿ.ಅಮೆರಿಕನ್ ಡಾ.ಬಹುಮಾನ ಹೊತ್ತಿದ್ದಾನೆ.
ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ,ಬಾಕಿಯುಳಿದಿರುವ ಆದೇಶವನ್ನು ಪಾಲಿಸಲು ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸುವಂತೆ ಪಾಕ್ ಸೇನೆಯ ಮುಖ್ಯಸ್ಥ ಜ.ರಾಹಿಲ್ ಶರೀಫ್ ಅವರಿಗೆ ಸಯೀದ್ ಸೂಚಿಸಿರುವ ಬೆನ್ನಿಗೇ ಸೆಮಿನರಿಯ ಈ ತೀರ್ಪು ಹೊರಬಿದ್ದಿದೆ.
ದರ್ಗಾ ಅಲಾ ಹಝರತ್ನೊಂದಿಗೆ ಗುರುತಿಸಿಕೊಂಡಿರುವ ಮಂಝರ್-ಎ-ಇಸ್ಲಾಮ್ ಸೌದಾಗರನ್ ಜೈಪುರದ ನಿವಾಸಿ ಮೊಹಮ್ಮದ್ ಮೊಯ್ನುದ್ದೀನ್ ಅವರ ಪ್ರಶ್ನೆಗೆ ಉತ್ತರವಾಗಿ ಈ ಫತ್ವಾ ಹೊರಡಿಸಿದೆ. ಇಸ್ಲಾಮಿಗೂ ಸಯೀದ್ಗೂ ಯಾವುದೇ ಸಂಬಂಧವಿಲ್ಲವೆಂದು ಅದು ಸ್ಪಷ್ಟಪಡಿಸಿದೆ.