ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯಿಂದ ರೈಲ್ವೆ ಸಚಿವರಿಗೆ ಮನವಿ

ಮಂಗಳೂರು,ಆ.18: ಕೇಂದ್ರ ಸರಕಾರದ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು ಅವರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ವತಿಯಿಂದ ಎಂಜೆಆರ್ (ಮರವೂರು -ಜೋಕಟ್ಟೆ- ಪಣಂಬೂರು) ರಸ್ತೆ ಹಾಗೂ ತೋಕೋರು ಪೇಜಾವರ ರೈಲ್ವೆ ನಿಲ್ದಾಣದ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ರೈಲ್ವೆ ಕೆಳ ಸೇತುವೆ ರಸ್ತೆಯ ಬದಲಾಗಿ ಮರವೂರು-ಜೋಕಟ್ಟೆ -ಪಣಂಬೂರು ರಸ್ತೆಯ ಬಳಿಯ ಕೆಬಿಎಸ್ ಎಂಬಲ್ಲಿ ರೈಲ್ವೇ ಮೇಲ್ಸೇತುವೆ ರಸ್ತೆ ನಿರ್ಮಸುವಂತೆ ನಾಗರಿಕ ಸಮಿತಿಯ ಅಧ್ಯಕ್ಷ ಬಿ.ಎಸ್.ಹುಸೈನ್ ಮನವಿ ಸಲ್ಲಿಸಿದ್ದಾರೆ.
ಪ್ರಸಕ್ತ ಈ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೆಳಸೇತುವೆಯು ಕೇವಲ ಲಘ ವಾಹನಗಳಿಗೆ ಹೋಗಲು ಸೀಮಿತವಾಗಿದೆ. ಈ ಪ್ರದೇಶವು ತಿರುವು ರಸ್ತೆಯಾಗಿರುವುದರಿಂದ ಸಂಚಾರಕ್ಕೂ ಅಪಾಯಕಾರಿಯಾಗಲಿದೆ. ಎಂಜೆಪಿ ಲೋಕೋಪಯೋಗಿ ರಸ್ತೆ ಎಂಎಸ್‌ಇಝಡ್ ಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು ಈಗ ನಿರ್ಮಿಸಲು ಉದ್ದೇಶಿಸಿರುವ ಆರ್‌ಯುಬಿ ರಸ್ತೆಯು ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿರುವುದರಿಂದ ಹಾಗೂ ಹಲವು ಸಮಸ್ಯೆಗಳಿಗೆ ಕಾರಣವಾಗುವುದರಿಂದ ಅದನ್ನು ಕೈಬಿಟ್ಟು ಆರ್‌ಒಬಿ ನಿರ್ಮಿಸಬೇಕು ಎಂದು ಸಮಿತಿಯ ಅಧ್ಯಕ್ಷ ಬಿ.ಎಸ್.ಹುಸೈನ್ ಮನವಿಯಲ್ಲಿ ತಿಳಿಸಿದ್ದಾರೆ.







