ಮಲ್ಪೆಮೀನುಗಾರರಿಂದ ಸಮುದ್ರಪೂಜೆ

ಮಲ್ಪೆ, ಆ.18: ಮಲ್ಪೆ ಮೀನುಗಾರರ ಸಂಘದ ವತಿಯಿಂದ ಸಮಸ್ತ ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಗುರುವಾರ ಮಲ್ಪೆಯ ವಡಬಾಂಡೇಶ್ವರ ಕಡಲ ಕಿನಾರೆಯಲ್ಲಿ ಸಮುದ್ರ ಪೂಜೆ ಯನ್ನು ನೆರವೇರಿಸಲಾಯಿತು. ಮೀನುಗಾರಿಕಾ ಸಮಯ ಅಧಿಕೃತ ವಾಗಿ ಆರಂಭಗೊಳ್ಳುವ ಸಂದರ್ಭ ದಲ್ಲಿ ಮೀನುಗಾರರು ತಲೆತಲಾಂತರದಿಂದ ಆಚರಿಸಿಕೊಂಡು ಬಂದಂತೆ ನೂಲ ಹುಣ್ಣಿಮೆಯ ದಿನದಂದು ಸಮುದ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕವೇ ಮೀನುಗಾರರು ಕಡಲಿಗೆ ಇಳಿದು ಅಧಿಕೃತ ಮೀನುಗಾರಿಕೆ ನಡೆಸುತ್ತಾರೆ. ಸಂಪ್ರದಾಯದಂತೆ ಜಿಲ್ಲೆಯ ಸಮಸ್ತ ಮೀನುಗಾರರ ಪರವಾಗಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ.ಕಿದಿಯೂರು ನೇತೃತ್ವದಲ್ಲಿ ಸಮುದ್ರ ಪೂಜೆ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸಮುದ್ರ ಪೂಜೆಯಲ್ಲಿ ಪಾಲ್ಗೊಂಡರು
.ಮಾಜಿ ಶಾಸಕ ಕೆ. ರಘುಪತಿ ಭಟ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಮೀನು ಗಾರರ ಸಂಘದ ಪ್ರಮುಖರಾದ ದಯಾನಂದ ಕೆ. ಸುವರ್ಣ, ಆನಂದ ಪಿ. ಸುವರ್ಣ, ವಿಠಲ ಕರ್ಕೇರ, ದಯಾನಂದ ಕುಂದರ್, ರತ್ನಾಕರ ಸಾಲ್ಯಾನ್, ರಮೇಶ್ ಕೋಟ್ಯಾನ್, ಗುಂಡು ಬಿ. ಅಮೀನ್, ರಾಮಚಂದ್ರ ಕುಂದರ್, ಗೋಪಾಲ್ ಆರ್. ಕುಂದರ್, ಕಿಶೋರ್ ಪಡುಕರೆ, ಸೋಮಪ್ಪ ಕಾಂಚನ್, ಸೋಮನಾಥ್ ಕಾಂಚನ್, ಸುರೇಶ್ ಕುಂದರ್, ನಾರಾಯಣ ಕರ್ಕೇರ, ಶೇಖರ್ ಜಿ. ಕೋಟ್ಯಾನ್, ಜನಾರ್ದನ ತಿಂಗಳಾಯ, ಹರಿಶ್ಚಂದ್ರ ಕಾಂಚನ್, ತಿಮ್ಮ ಮರಕಾಲ, ಕಿಶೋರ್ ಡಿ. ಸುವರ್ಣ, ಗಣೇಶ್ ಕುಂದರ್, ಸಂತೋಷ್ ಸಾಲ್ಯಾನ್, ಜಲಜ ಕೋಟ್ಯಾನ್, ಬೇಬಿ ಹೆಚ್.ಸಾಲ್ಯಾನ್, ಅಪ್ಪಿ ಸುವರ್ಣ ಮತ್ತಿತರರು ಪಾಲ್ಗೊಂಡಿದ್ದರು. ಕಾರು ಢಿಕ್ಕಿ: ಮಹಿಳೆ ಮೃತ್ಯು
ಕಾಪು, ಆ.18: ಕಟಪಾಡಿ ಸಮೀಪದ ತೇಕಲ್‌ತೋಟ ಎಂಬಲ್ಲಿ ಬುಧವಾರ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೌಕತ್‌ಅಲಿ ಎಂಬವರ ಪತ್ನಿ ರುಕ್ಸನಾ ಬಾನು ಎಂದು ಗುರುತಿಸಲಾಗಿದೆ. ಮನೆಯ ಕಸ ಎಸೆಯಲು ಹೆದ್ದಾರಿ ಇನ್ನೊಂದು ಬದಿಗೆ ಹೋಗಲು ನಿಂತಿದ್ದಾಗ ಕೇರಳದ ಕಾರೊಂದು ಢಿಕ್ಕಿ ಹೊಡೆದಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.





