ಲೋಕಸೇವಾ ಆಯೋಗದ ಪರೀಕ್ಷೆ; ಗುರುತಿನ ಚೀಟಿ ಕಡಾ್ಡಯ
ಬೆಂಗಳೂರು, ಆ.18: ಕರ್ನಾಟಕ ಲೋಕ ಸೇವಾ ಆಯೋಗವು ಆ.21ರಂದು ನಡೆಸಲಿರುವ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ 162 ಹುದ್ದೆಗಳ ಪೂರ್ವಭಾವಿ ಪರೀಕ್ಷೆಗೆ ಹಾಜರಾಗುವ ಮುನ್ನ್ನ ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಪಾಸ್‌ಪೋರ್ಟ್, ಚುನಾವಣಾ ಗುರುತಿನ ಚೀಟಿ ಸೇರಿದಂತೆ ಕೆಲವೊಂದು ಗುರುತಿನ ಚೀಟಿಗಳಲ್ಲಿ ಯಾವುದಾದರು ಒಂದನ್ನು ತರುವುದು ಕಡ್ಡಾಯ.
ಪತ್ರಾಂಕಿತ ಎ ಗುಂಪಿನ ಸಹಾಯಕ ನಿಯಂತ್ರಕರು ಹಾಗೂ ಪತ್ರಾಂಕಿತ ಬಿ ಗುಂಪಿನ ಲೆಕ್ಕ ಪರಿಶೋಧನಾಧಿಕಾರಿ ವೃಂದದ ಒಟ್ಟು 162 ಹುದ್ದೆಗಳ ಪೂರ್ವಭಾವಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದಾದರು ಒಂದು ಛಾಯಾಚಿತ್ರದೊಂದಿಗೆ ಗುರುತಿನ ಚೀಟಿ ತರುವುದು ಅಗತ್ಯ. ಇಲ್ಲವಾದಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗು ವುದಿಲ್ಲ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.
Next Story





