ಯುವಕ ನಾಪತ್ತೆ
ಮಂಗಳೂರು, ಆ.18 : ಕೇರಳ ಮೂಲದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರನ್ನು ನಿಶಾದಲಿ(21) ಎಂದು ಗುರುತಿಸಲಾಗಿದೆ. ಅವರು ಮೊಬೈಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಆ.14ರಂದು ತನ್ನ ಗೆಳೆಯನಿಗೆ ಕೇರಳದ ಕಣ್ಣೂರಿನಲ್ಲಿ ಅಫಘಾತವಾಗಿದೆಯೆಂದು ಹೋದವರು ವಾಪಸ್ ಬಾರದೆ ಕಾಣೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ದೂ.ಸ. :0824-2220540 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ
Next Story





