ಗಡಿಯಲ್ಲಿ ದಕ್ಷಿಣ ಕೊರಿಯದಿಂದ ಬೃಹತ್ ಫಿರಂಗಿ ಅಭ್ಯಾಸ
ಸಿಯೋಲ್, ಆ. 18: ದಕ್ಷಿಣ ಕೊರಿಯದ ಸೇನೆಯು ಗುರುವಾರ ಉದ್ವಿಗ್ನ ಉತ್ತರ ಕೊರಿಯ ಗಡಿ ಸಮೀಪ ಈ ಹಿಂದೆಂದೂ ನಡೆಸದ ಬೃಹತ್ ಫಿರಂಗಿ ಅಭ್ಯಾಸ ನಡೆಸಿತು. ಆದರೆ, ಉತ್ತರ ಕೊರಿಯ ಇದಕ್ಕೆ ತಕ್ಷಣದ ಸೇನಾ ಪ್ರತಿಕ್ರಿಯೆ ನೀಡಿಲ್ಲ.
ಗುರುವಾರ ಅಪರಾಹ್ನ ಗಡಿಯುದ್ದಕ್ಕೂ ನಿಯೋಜನೆಗೊಂಡ ಡಝನ್‌ಗಟ್ಟಳೆ ಸೇನಾ ತುಕಡಿಗಳು ಒಟ್ಟು 300 ಫಿರಂಗಿ ವ್ಯವಸ್ಥೆಗಳ ಮೂಲಕ ಏಕಕಾಲದಲ್ಲಿ ವಿವಿಧ ದಿಕ್ಕುಗಳತ್ತ ಶೆಲ್ ದಾಳಿಗಳನ್ನು ನಡೆಸಿದವು ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದರು.
ದಕ್ಷಿಣ ಕೊರಿಯ ಸೇನೆಯು ನಿಯಮಿತವಾಗಿ ಗಡಿಯಲ್ಲಿ ಫಿರಂಗಿ ಅಭ್ಯಾಸ ನಡೆಸುತ್ತದೆಯಾದರೂ, ಇಷ್ಟು ಬೃಹತ್ ಪ್ರಮಾಣದಲ್ಲಿ ನಡೆಸಿರುವುದು ಇದೇ ಮೊದಲ ಬಾರಿಯಾಗಿದೆ.
Next Story





