ಈ ಏಳು ಗುಣಗಳು ನಿಮ್ಮಲ್ಲಿದ್ದರೆ ನೀವು ನಿಮ್ಮ ಸಂಸ್ಥೆಗೆ ಹೆಮ್ಮೆಯಲ್ಲ, ಹೊರೆಯಾಗಿದ್ದೀರಿ!
.jpg)
ಕೆಲವು ಉದ್ಯೋಗಿಗಳು ಇತರರಿಗಿಂತ ಉತ್ತಮವಾಗಿರುತ್ತಾರೆ. ಆದರೆ ಕಚೇರಿಯಲ್ಲಿ ನೀವೇ ಸಮಸ್ಯೆ ಸೃಷ್ಟಿಸುವ ಸಿಬ್ಬಂದಿಯಾಗಿದ್ದಲ್ಲಿ? ನೀವು ಅತೀ ಕೆಟ್ಟ ವರ್ತನೆಯ ಸಿಬ್ಬಂದಿಯಾಗಿದ್ದೀರಿ ಎನ್ನುವ ಮಾತ್ರಕ್ಕೆ ವೃತ್ತಿಪರವಾಗಿ ಸೋಮಾರಿ ಅಥವಾ ಯಶಸ್ಸು ಸಿಗದ ವ್ಯಕ್ತಿಯಾಗಿರಲೇಬೇಕೆಂದಿಲ್ಲ. ನೀವು ನಿಮ್ಮ ಬಾಸ್ ಜೊತೆಗೆ ಹೊಂದಿಕೊಳ್ಳದೆ ಇದ್ದಲ್ಲಿ ಕಂಪೆನಿಗೆ ತಕ್ಕ ವ್ಯಕ್ತಿಯಾಗಿರುವುದಿಲ್ಲ. ಅಥವಾ ತಪ್ಪು ಉದ್ಯಮದಲ್ಲಿ ಉದ್ಯೋಗನಿರತರಾಗಿರುತ್ತೀರಿ. ನೀವು ಉತ್ತಮ ಕೆಲಸ ಮಾಡುತ್ತಿಲ್ಲ ಎಂದು ನಿಮಗೆ ಅನಿಸಿದಲ್ಲಿ ಅದಕ್ಕೆ ಕಾರಣ ಕಂಡುಕೊಳ್ಳಿ ಮತ್ತು ಪರಿಸ್ಥಿತಿ ನಿಭಾಯಿಸಲು ಹೆಜ್ಜೆ ಇಡಿ. ಆದರೆ ಅದಕ್ಕಿಂತ ಮೊದಲು ಈ ಏಳು ಚಿಹ್ನೆಗಳ ಮೂಲಕ ನೀವು ಕಚೇರಿಯಲ್ಲಿ ಸಮಸ್ಯೆ ಸೃಷ್ಟಿಸುವ ವ್ಯಕ್ತಿಯೇ ಎನ್ನುವುದನ್ನು ನಿರ್ಧರಿಸಿಕೊಳ್ಳಿ.
ಸಮಯ ಪಾಲಿಸುವುದಿಲ್ಲ
ಮುಖ್ಯ ಡೆಡ್ ಲೈನ್ ಮರೆಯುವುದು, ಸಭೆಗೆ ತಡವಾಗಿ ಹೋಗುವುದು ಅಥವಾ ಸಮಯವಲ್ಲದ ಸಮಯದಲ್ಲಿ ನಿಧಾನವಾಗಿ ಕೆಲಸ ಮಾಡುವುದು, ಸೋಮಾರಿತನದ ಅಭ್ಯಾಸ ಕೆಟ್ಟ ವರ್ಚಸ್ಸನ್ನು ಸೃಷ್ಟಿಸುತ್ತದೆ. ಇದು ನೀವು ಇತರರ ಸಮಯಕ್ಕೆ ಗೌರವ ಕೊಡುವುದಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ನೆಪಗಳು
ನಿಮ್ಮ ಅಸಾಮರ್ಥ್ಯವನ್ನು ಸಮರ್ಥಿಸಿಕೊಳ್ಳಲು ನೆಪಗಳನ್ನು ಅವಲಂಬಿಸಬೇಡಿ. ನಿಮ್ಮ ತಪ್ಪುಗಳಿಗೆ ನೀವೇ ಜವಾಬ್ದಾರರಾಗಿ. ತಪ್ಪು ಸರಿಪಡಿಸಲು ಕೆಲಸ ಮಾಡಿ. ನಿಮಗೆ ಸಂಶಯವಿದ್ದಲ್ಲಿ ಸಹಾಯ ಕೇಳಿ ಮತ್ತು ನಿಮ್ಮ ಕೆಲಸ ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಳ್ಳಿ.
ಕನಿಷ್ಠ ಕೆಲಸ ಮಾಡುವುದು
ಕೆಲಸ ಕಳೆದುಕೊಳ್ಳಬಾರದು ಎಂದೇ ಸಾಕಷ್ಟು ಪ್ರಯತ್ನಿಸುತ್ತೀರಿ. ಬಾಸ್ ನಿಮಗೆ ಏನಾದರೂ ಸವಾಲಿನ ಕೆಲಸ ನಿಭಾಯಿಸಲು ಹೇಳಿದರೆ ಕೆರಳುತ್ತೀರಿ. ಇಂತಹ ಕೆಲಸದ ಸಿದ್ಧಾಂತದಿಂದ ನೀವು ಸ್ವತಃ ವರ್ಚಸ್ಸನ್ನು ಕೆಡಿಸಿಕೊಳ್ಳುವಿರಿ.
ಗಾಸಿಪ್ ಮಾಡುವ ಆಸೆ
ಎಲ್ಲಾ ಗಾಸಿಪ್‌ಗಳೂ ಕೆಟ್ಟದಲ್ಲ. ಆದರೆ ಕ್ಷುಲ್ಲಕ, ಹೆಚ್ಚು ಅಗತ್ಯವಿಲ್ಲದ ಟೀಕೆಯ ವಿಷಯಕ್ಕೆ ಬಂದಾಗ ಅಂತಹ ಗಾಳಿಮಾತುಗಳಿಂದ ದೂರವಿರಿ. ಅದು ನಿಮ್ಮ ವರ್ಚಸ್ಸನ್ನು ಹಾಳುಗೆಡವಲಿದೆ.
ಅತಿಯಾದ ಆತ್ಮವಿಶ್ವಾಸ
ನಿಮ್ಮ ಉದ್ಯೋಗ ಸ್ಥಳದಲ್ಲಿ ನೀವೇ ಅತೀ ಜಾಣ ವ್ಯಕ್ತಿ ಎಂದುಕೊಂಡಲ್ಲಿ ಅದನ್ನು ಮರೆತುಬಿಡಿ. ಆತ್ಮವಿಶ್ವಾಸವಿರುವುದು ಉತ್ತಮವೇ ಮತ್ತು ಕೆಲವು ವಿಚಾರಗಳಲ್ಲಿ ನೀವು ಬುದ್ಧಿವಂತರೂ ಆಗಿರಬಹುದು. ಆದರೆ ಸೊಕ್ಕು ತೋರಿಸುವ ಸಹೋದ್ಯೋಗಿಯನ್ನು ಯಾರೂ ಬಯಸುವುದಿಲ್ಲ.
ಕಚೇರಿ ಬಿಡಲು ಕಾಯುವುದು
ಯಾವಾಗಲೂ ಗಂಟೆಯನ್ನೇ ನೋಡುತ್ತಾ ದಿನ ಮುಗಿಯುವುದಕ್ಕಾಗಿ ಕಾಯುತ್ತಿದ್ದಲ್ಲಿ, ಪ್ರತೀ ಅವಕಾಶಗಳಲ್ಲೂ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದಲ್ಲಿ ಮತ್ತು ಹೆಚ್ಚು ಸಾಮರ್ಥ್ಯ ಹಾಕಲು ಪ್ರಯತ್ನಿಸದೆ ಇದ್ದಲ್ಲಿ ಉದ್ಯೋಗದ ವಿಷಯದಲ್ಲಿ ನೀವು ಬದ್ಧತೆ ಹೊಂದಿಲ್ಲ ಎಂದುಕೊಳ್ಳಬಹುದು.
ನಿರಂತರ ಬೇಡಿಕೆಗಳು
ಎಲ್ಲಾ ಉದ್ಯೋಗಗಳಲ್ಲೂ ಮಾತುಕತೆಗಳಿರುತ್ತವೆ. ನೀವು ಸಾಧ್ಯವಾದಷ್ಟು ಉತ್ತಮ ವೇತನ, ಲಾಭಗಳು, ಗಂಟೆಗಳು ಮತ್ತು ಅಸೈನ್‌ಮೆಂಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕು. ಆದರೆ ಕಂಪೆನಿಯಲ್ಲಿ ನಿಮ್ಮ ಮೌಲ್ಯ ಏರಿಸುವ ಯಾವುದೇ ಸೂಚನೆ ಕೊಡದೆ ನಿರಂತರವಾಗಿ ಬೇಡಿಕೆಗಳನ್ನು ಇಡುತ್ತಾ ಹೋದಲ್ಲಿ ಅದರಿಂದ ನಿಮಗೆ ಕೆಟ್ಟ ವರ್ಚಸ್ಸೇ ಬರಬಹುದು.
ಕೃಪೆ: economictimes.indiatimes.com







