ಇರಾನ್ ವಾಯುನೆಲೆಯಿಂದ ಸಿರಿಯದ ಮೇಲೆ ದಾಳಿ: ಅಮೆರಿಕ, ರಷ್ಯಗಳ ನಡುವೆ ಭಿನ್ನಮತ ತಾರಕಕ್ಕೆ!

ವಾಷಿಂಗ್ಟನ್, ಆಗಸ್ಟ್ 19: ಸಿರಿಯಕ್ಕೆ ದಾಳಿ ನಡೆಸಲಿಕ್ಕಾಗಿ ಇರಾನ್‌ನ ವಾಯುನೆಲೆಯನ್ನು ಬಳಸುವ ರಷ್ಯದ ಕ್ರಮ ವಿಶ್ವಸಂಸ್ಥೆಯ ಆಧ್ಯಾದೇಶದ ಉಲ್ಲಂಘನೆಯಾಗಿದೆ ಎಂದು ಅಮೆರಿಕ ಹೇಳಿದೆ. ಇರಾನ್‌ಗೆ ಯುದ್ಧವಿಮಾನಗಳನ್ನು ನೀಡುವ ಮೊದಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅನುಮತಿ ಪಡೆದಿರಬೇಕು. ಇರಾನ್‌ನೊಂದಿಗೆ ಬೃಹತ್‌ರಾಷ್ಟ್ರಗಳು ಅಣುಒಪ್ಪಂದ ತಯಾರು ಮಾಡುವುದರ ಅಂಗವಾಗಿ ಭದ್ರತಾ ಸಮಿತಿ ಪಾಸು ಮಾಡಿರುವ ಆಧ್ಯಾದೇಶದಲ್ಲಿ ಇದಕ್ಕೆ ಸಂಬಂಧಿಸಿದ ಸ್ಪಷ್ಟ ನಿರ್ದೇಶನಗಳಿವೆ. ಈ ನಿರ್ದೇಶನಗಳನ್ನು ರಷ್ಯ ಉಲ್ಲಂಘಿಸಿದೆ ಎಂದು ಅಮೆರಿಕ ಹೇಳುತ್ತಿದೆಯೆಂದು ವರದಿಯಾಗಿದೆ.
ಇರಾನ್ ಯುದ್ಧವಿಮಾನಗಳನ್ನುಮತ್ತು ಸೈನಿಕ ಸಿದ್ಧತೆಗಳನ್ನು ಹಸ್ತಾಂತರಿಸಿದೆ ಎಂಬುದು ಒಂದು ಸಾಮಾನ್ಯ ವಿಚಾರವಲ್ಲ. ಗಂಭೀರ ವಿಚಾರವಾಗಿದೆ ಎಂದು ಅಮೆರಿಕ ರಾಜ್ಯಾಂಗ ಕಾರ್ಯದರ್ಶಿ ಮಾಕ್‌ಟೋನರ್ ಹೇಳಿದ್ದಾರೆ. ರಷ್ಯ ನಡೆಸುವ ದಾಳಿಯಲ್ಲಿ ಸಾಯುತ್ತಿರುವುದು ಸಾಮಾನ್ಯ ಜನರು ಮತ್ತು ಮಿತವಾದಿಗಳಾದ ಸಿರಿಯದ ಪ್ರತಿಪಕ್ಷಗಳ ಸಂಘಟನೆಗಳ ಜನರು ಎಂದು ಟೋನರ್ ಬಹಿರಂಗಪಡಿಸಿದ್ದಾರೆ. ಸಿರಿಯದ ಸಂಘರ್ಷ ಕೊನೆಗೊಳ್ಳಬೇಕೆಂದು ಅಮೆರಿಕ ಬಯಸುತ್ತಿದೆ.ಆದರೆ ರಷ್ಯ ನಡೆಸುತ್ತಿರುವ ವ್ಯೋಮ ದಾಳಿ ಅದಕ್ಕೆ ಅನುಯೋಜ್ಯವಾಗಿಲ್ಲ. ಇದು ದುರದೃಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆಂದು ವರದಿ ತಿಳಿಸಿದೆ.
ಗುರುವಾರದಿಂದ ಇರಾನ್‌ನ ವ್ಯೋಮ ನೆಲೆಯಿಂದ ರಷ್ಯ ಸಿರಿಯದ ಮೇಲೆ ದಾಳಿ ಆರಂಭಿಸಿದೆ. ಆದರೆ ಈತನ್ಮಧ್ಯೆ ರಷ್ಯ ಅಮೆರಿಕದ ಆರೋಪವನ್ನು ತಳ್ಳಿಹಾಕಿದೆ. ವಿಶ್ವಸಂಸ್ಥೆಯ ಆದ್ಯಾದೇಶಗಳನ್ನು ಉಲ್ಲಂಘಿಸಲಾಗಿದೆ ಎಂಬ ಅಮೆರಿಕದ ಆರೋಪ ಆಧಾರರಹಿತವಾದುದೆಂದು ರಷ್ಯದ ವಿದೇಶ ಸಚಿವ ಸರ್ಜಿ ಲಾವ್ರೋವ್ ಹೇಳಿದ್ದಾರೆ.
ಇರಾನ್‌ಗೆ ರಷ್ಯ ಆಯುಧಗಳನ್ನು ನೀಡಿಲ್ಲ. ಸಿರಿಯದ ಆಕ್ರಮಣಕ್ಕೆ ಇರಾನ್‌ನ ವ್ಯೋಮ ನೆಲೆಗಳನ್ನು ಅವರ ಅನುಮತಿ ಪಡೆದು ಬಳಸಲಾಗುತ್ತಿದೆ. ಇದು ಚರ್ಚೆಗೆ ಅಗತ್ಯವಿಲ್ಲದ ಸಂಗತಿಯಾಗಿದೆ ಎಂದು ಲಾವ್ರೋವ್ ಅಮೆರಿಕದ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆಂದು ವರದಿ ತಿಳಿಸಿದೆ. ವಿಶ್ವಸಂಸ್ಥೆಯ ಆದ್ಯಾದೇಶಗಳನ್ನು ಅಮೆರಿಕ ಮತ್ತೊಮ್ಮೆ ಓದಿ ನೋಡಲಿ ಎಂದು ರಷ್ಯದ ರಕ್ಷಣಾ ಸಚಿವಾಲಯದ ಹೇಳಿಕೆ ಸೂಚಿಸಿದೆ. ಜೊತೆಗೆ ಟರ್ಕಿಯ ಇನ್‌ಸಿಲರಿಕ್ ವ್ಯೋಮನೆಲೆಯಿಂದ ಅಮೆರಿಕ ನಡೆಸುತ್ತಿರುವ ಮಿಸೈಲ್ ದಾಳಿ ವಿಶ್ವಸಂಸ್ಥೆಯ ಆದ್ಯಾದೇಶಗಳಿಗೆ ವಿರುದ್ಧವಾಗಿದೆ ಎಂದು ರಷ್ಯದ ರಕ್ಷಣಾ ಸಚಿವಾಲಯ ಆರೋಪಿಸಿದೆ ಎಂದು ತಿಳಿದು ಬಂದಿದೆ.
ಈ ನಡುವೆ, ರಷ್ಯದ ಕ್ರಮವನ್ನು ಬೆಂಬಲಿಸಿ ಇರಾನ್ ರಂಗಪ್ರವೇಶಿಸಿದೆ. ಸಿರಿಯ ಸರಕಾರದ ಮನವಿಯಂತೆ ಇರಾನ್ ರಷ್ಯ ಸೇರಿ ನಡೆಸುತ್ತಿರುವ ಪ್ರಕ್ರಿಯೆಯಲ್ಲಿ ಕಾನೂನುಬಾಹಿರವಾಗಿದ್ದು ಯಾವುದೂ ಇಲ್ಲ ಎಂದು ಇರಾನ್‌ನ ಪರಮೋಚ್ಚ ನಾಯಕ ಅಲಿ ಖಾಮ್‌ನಾ ಅವರ ಸಲಹೆಗಾರ ಅಲಿ ಅಕ್ಬರ್ ವಿಲಾಯತಿ ಹೇಳಿದ್ದಾರೆಂದು ವರದಿಯಾಗಿದೆ.







