ರಾಣಿಯ ಹತ್ಯೆ ಬೆದರಿಕೆ ಹಾಕಿದ ‘ಮಾನಸಿಕ ಅಸ್ವಸ್ಥ ’
ಚೀನಿ ವಿದ್ಯಾರ್ಥಿಯ ವಿರುದ್ಧ ಕೊಲೆ ಪ್ರಕರಣ ಇಲ್ಲ

ಬಕಿಂಗ್ ಹ್ಯಾಮ್,ಆ.19: ಬಕಿಂಗ್‌ಹ್ಯಾಮ್ ಅರಮನೆಗೆ ಚಾಕುವಿನೊಂದಿಗೆ ಪ್ರವೇಶಿಸಿದ ಮತ್ತು ರಾಣಿಯನ್ನು ಹತ್ಯೆಗೈಯುತ್ತೇನೆ ಎಂದು ಬೆದರಿಕೆ ಒಡ್ಡಿದ ಆರೋಪದಲ್ಲಿ ಚೀನದ ವಿದ್ಯಾರ್ಥಿಯೋರ್ವನನ್ನು ಬಂಧಿಸಿದ್ದಾರೆ.ಶೇಫಿಲ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿರುವ ಝಾಂಗ್ (25)ನನ್ನು ಕಳೆದ ಶುಕ್ರವಾರ ಪೊಲೀಸರು ಬಂಧಿಸಿದ್ದರು. ಮಂಗಳವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವರದಿಯಾಗಿದೆ.
ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸಿದ ಬಳಿಕ ಠಾಣೆಗೆ ಕರೆದೊಯ್ದು ವಿಚಾರಿಸಿದ ವೇಳೆ ಆತನ ಶೂ ನಲ್ಲಿ ಕಟ್ಟಿದ ಪ್ಯಾಕೆಟೊಂದರಲ್ಲಿ ಚಾಕು ಕಂಡು ಬಂದಿತ್ತು.ರಾಜಮನೆತನ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ ಆರೋಪವಿದ್ದರೂ ಮಾನಸಿಕ ರೋಗಿಯೆಂದು ಗೊತ್ತಾದ ನಂತರ ಆತನ ವಿರುದ್ಧ ರಾಣಿಯ ಕೊಲೆ ಯತ್ನ ಪ್ರಕರಣವನ್ನು ಕೈಬಿಡಲಾಗಿದೆ ಆದರೆ ತನ್ನನ್ನು ಚೀನಾ ಸರಕಾರದ ಪ್ರತಿನಿಧಿಗಳು ಹಿಂಬಾಲಿಸುತ್ತಾರೆ ಎಂಬ ಹೆದರಿಕೆ ಝಾಂಗ್‌ಗಿದೆ ಎಂದು ಮೇಲ್ ಆನ್‌ಲೈನ್ ವರದಿ ಮಾಡಿದೆ.
ಝಾಂಗ್ ಈಗ ಆಕ್ರಮಣಕಾರಿ ಆಯುಧ ಪಡೆದಿರುವ ಆರೋಪವನ್ನು ಎದುರಿಸುತ್ತಿದ್ದಾನೆ. ಮಂಗಳವಾರ ಪುನಃ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಇವಿನಿಂಗ್ ಸ್ಟಾಂಡರ್ಡ್ ಪತ್ರಿಕೆ ವರದಿ ಮಾಡಿದೆ.
ಇದನ್ನು ಭಯೋತ್ಪಾದನೆ ಸಂಬಂಧಿ ಪ್ರಕರಣವಾಗಿ ನಾವು ನೋಡುವುದಿಲ್ಲ .ಅತಿಕ್ರಮ ಪ್ರವೇಶಕ್ಕೆ ಆತ ಯತ್ನಿಸುತ್ತಿದ್ದ ಸಮಯದಲ್ಲಿ ಬಕಿಂಗ್‌ಹ್ಯಾಮ್ ಅರಮನೆಯ ಒಳಗಡೆ ರಾಣಿಯಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೇ ಯಿಂದ ಈವರೆಗೂ ಇದು ನಾಲ್ಕನೆ ಬಾರಿ ಭದ್ರತಾ ಎಚ್ಚರಿಕೆಯನ್ನು ಅರಮನೆಯಲ್ಲಿ ಘೋಷಿಸಿಲಾಗಿದೆ.







