ದಮ್ಮಾಮ್: ಕೆಸಿಎಫ್ ವತಿಯಿಂದ ಆಝಾದಿ ಹಿಂದ್ ಸಂಗಮ

ದಮ್ಮಾಮ್, ಆ.19: ಸ್ವಾತಂತ್ರೋತ್ಸವದ ಅಂಗವಾಗಿ ಕೆಸಿಎಫ್ ದಮ್ಮಾಮ್ ಝೋನ್ ವತಿಯಿಂದ ಅಲ್ ಹಸ್ಸಾ ಘಟಕದಲ್ಲಿ ‘ಆಝಾದಿ ಹಿಂದ್ ಸಂಗಮ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಸಿಎಫ್ ದಮ್ಮಾಮ್ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ ಮಾತನಾಡಿ, ಪ್ರಾಣಿಗಳ ಹೆಸರಿನಲ್ಲಿ ಮನುಷ್ಯರನ್ನು ಕೊಂದು ಭೀತಿಯನ್ನು ಹಬ್ಬಿಸುವ ಕೋಮುವಾದಿಗಳ ಕೃತ್ಯಗಳನ್ನು ಖಂಡಿಸಿದರು.
ಕೆಸಿಎಫ್(ಐಎನ್‌ಸಿ) ಮುಖಂಡ ಖಮರುದ್ದೀನ್ ಗೂಡಿನಬಳಿ, ಕೆಸಿಎಫ್ ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ರಾಷ್ಟ್ರೀಯ ಪಿಆರ್ ವಿಂಗ್ ಚೇರ್ಮನ್ ಆಸಿಫ್ ಗೂಡಿನಬಳಿ, ಕನ್ವೀನರ್ ಅಶ್ರು ಬಜ್ಪೆ ಹಾಗೂ ಕೆಸಿಎಫ್ ಅಲ್ ಹಸ್ಸಾ ಅಧ್ಯಕ್ಷ ಅಶ್ರಫ್ ಉಳ್ಳಾಲ, ಕಾರ್ಯದರ್ಶಿ ಇಕ್ಬಾಲ್ ಗುಲ್ವಾಡಿ, ಅಹ್ಮದ್ ಸಅದಿ, ಕೊಡಗು ಸಅದಿ, ಮುಹಿಯುದ್ದೀನ್ ಅಡ್ಡೂರು ಉಪಸ್ಥಿತರಿದ್ದರು.
ಕೆಸಿಎಫ್ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯ ಸೆಕ್ಟರ್ ವಿಭಾಗದಲ್ಲಿ, ಅಲ್ ಹಸ್ಸಾ ಘಟಕದ ಇಸಾಕ್ ಫಜೀರು ಪ್ರಥಮ ಇಕ್ಬಾಲ್ ಜಿ.ಕೆ.ಗುಲ್ವಾಡಿ ದ್ವಿತೀಯ ಬಹುಮಾನ ಪಡೆದರು. ದಮ್ಮಾಮ್ ಝೋನಲ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ ಸ್ವಾಗತಿಸಿದರು. ಹಾರೀಸ್ ಕಾಜೂರು ವಂದಿಸಿದರು.





