ಸಜೀಪಮೂಡ ಹಿಂದೂ ರುದ್ರಭೂಮಿಗೆ ಹೈಕೋರ್ಟ್ ತಡೆಯಾಜ್ಞೆ
ಬಂಟ್ವಾಳ, ಆ. 19: ಸಜೀಪಮೂಡ ಗ್ರಾಮ ಪಂಚಾಯತ್ ಗ್ರಾಮದ ಪಟ್ಟುಗುಡ್ಡೆ ಎಂಬಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಿಂದೂ ರುದ್ರಭೂಮಿ ಕಾಮಗಾರಿಗೆ ರಾಜ್ಯ ಉಚ್ಛ ನ್ಯಾಯಾಲಯ ಮೂರು ತಿಂಗಳವರೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಈ ಸಂಬಂಧ ಪಟ್ಟುಗುಡ್ಡೆಯ ಶೋಭಾ ಶೆಟ್ಟಿ ಎಂಬವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಝೀರ್ ಹಿಂದೂ ರುದ್ರಭೂಮಿ ಕಾಮಗಾರಿಗೆ ಮೂರು ತಿಂಗಳವರೆಗೆ ತಡೆಯಾಜ್ಞೆ ನೀಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಈ ಮೊದಲು ಹಿಂದೂ ರುದ್ರಭೂಮಿಗೆ ಮೀಸಲಿಟ್ಟ ಜಾಗವನ್ನು ಬದಲಾಯಿಸಿ ಬಳಿಕ ಜಿಲ್ಲಾಧಿಕಾರಿಯವರ ಆದೇಶದಂತೆ ನಮ್ಮ ಹಾಗೂ ಹಲವಾರು ವಾಸದ ಮನೆಗಳು, ಕುಡಿಯುವ ನೀರಿನ ಬಾವಿಗಳು ಇರುವ ಹಾಗೂ ನಾಗಬನಕ್ಕೆ ತಾಗಿಕೊಂಡೇ ಇರುವ ಸರಕಾರಿ ಜಮೀನಿನಲ್ಲಿ ಹಿಂದೂ ರುದ್ರಭೂಮಿ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಲಾಗಿದೆ.
ಇಲ್ಲಿ ರುದ್ರಭೂಮಿ ನಿರ್ಮಾಣವಾಗುವುದರಿಂದ ಸ್ಥಳೀಯ ಜನರಿಗೆ ಸಾಕಷ್ಟು ತೊಂದರೆಯಾಗಲಿರುವುದರಿಂದ ರುದ್ರಭೂಮಿಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು.





