Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ರಿಯೋ ಒಲಿಂಪಿಕ್ಸ್: ‘ಬೆಳ್ಳಿಯ’ ನಗೆ...

ರಿಯೋ ಒಲಿಂಪಿಕ್ಸ್: ‘ಬೆಳ್ಳಿಯ’ ನಗೆ ಬೀರಿದ ಸಿಂಧು

ವಾರ್ತಾಭಾರತಿವಾರ್ತಾಭಾರತಿ19 Aug 2016 8:59 PM IST
share
ರಿಯೋ ಒಲಿಂಪಿಕ್ಸ್: ‘ಬೆಳ್ಳಿಯ’ ನಗೆ ಬೀರಿದ ಸಿಂಧು

ರಿಯೋ ಡಿ ಜನೈರೊ,ಆ.19: ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ಫೈನಲ್‌ಗೆ ತಲುಪಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ರಿಯೋ ಒಲಿಂಪಿಕ್ಸ್‌ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ಶುಕ್ರವಾರ ಇಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 21ರ ಹರೆಯದ ಸಿಂಧು ವಿಶ್ವದ ನಂ.1 ಆಟಗಾರ್ತಿ ಸ್ಪೇನ್‌ನ ಕರೋಲಿನಾ ಮರಿನ್ ವಿರುದ್ಧ 21-19, 12-21, 15-21 ಗೇಮ್‌ಗಳ ಅಂತರದಿಂದ ಸೋತರು. ಮೊದಲ ಗೇಮ್‌ನಲ್ಲಿ ಒಂದು ಹಂತದಲ್ಲಿ 11-15 ಗೇಮ್‌ಗಳಿಂದ ಹಿನ್ನಡೆಯಲ್ಲಿದ್ದ ಸಿಂಧು ತಿರುಗೇಟು ನೀಡಲು ಯಶಸ್ವಿಯಾಗಿದ್ದು, ಮೊದಲ ಗೇಮ್‌ನ್ನು 21-19 ಅಂತರದಿಂದ ಗೆದ್ದುಕೊಂಡರು.
ರಿಯೋ ಗೇಮ್ಸ್‌ನಲ್ಲಿ ಫೈನಲ್‌ಗೆ ತಲುಪಿರುವ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದ ಸಿಂಧು ಬೆಳ್ಳಿ ಪದಕ ಜಯಿಸಿ ಸ್ಮರಣೀಯ ಸಾಧನೆ ಮಾಡಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚು ಜಯಿಸಿರುವ ಸಿಂಧು ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಜಪಾನ್‌ನ ನೊರೊಮಿ ಒಕುಹರಾ ವಿರುದ್ಧ 21-19, 21-10 ಗೇಮ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ತಲುಪಿದ್ದರು.
ಬೆಳ್ಳಿ ಪದಕವನ್ನು ಜಯಿಸಿರುವ ಸಿಂಧು ರಿಯೋ ಗೇಮ್ಸ್‌ನಲ್ಲಿ ಭಾರತದ ಖಾತೆಗೆ ಎರಡನೆ ಪದಕ ಜಮೆ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 7ನೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದಾರೆ.

ಸಿಂಧುವನ್ನು ಮಣಿಸಿರುವ ಮರಿನ್‌ಗೆ ಇದು ಚೊಚ್ಚಲ ಒಲಿಂಪಿಕ್ಸ್.

 ಸಿಂಧು ಒಲಿಂಪಿಕ್ಸ್ ಹಾದಿ
ಸೈನಾ ನೆಹ್ವಾಲ್‌ 2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದಾಗ ಸಿಂಧು ಹದಿನಾರರ ಬಾಲಕಿ. ಸೈನಾ ಆಟವನ್ನು ಟಿವಿಯ ಮೂಲಕ ನೋಡಿದ್ದರು.ಅಂದು ಸೈನಾ ಅವರಂತೆ ಒಲಿಂಪಿಕ್ಸ್ ನಲ್ಲಿ ಆಡುವ ಕನಸು ಕಂಡಿದ್ದರು. ಕೇವಲ ನಾಲ್ಕು ವರ್ಷದಲ್ಲೇ ಸೈನಾರನ್ನು ಮೀರಿಸಿ ಇತಿಹಾಸ ಬರೆದಿದ್ದಾರೆ.ಕಠಿಣ ಪ್ರಯತ್ನದ ಮೂಲಕ ಒಲಿಂಪಿಕ್ಸ್‌ ಬೆಳ್ಳಿಯನ್ನು ಬಾಚಿಕೊಂಡಿದ್ದಾರೆ.
2013ರಲ್ಲಿ ಮಲೇಷ್ಯನ್‌ ಜಿ.ಪಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಗಮನ ಸೆಳೆದ ಸಿಂಧು ಬಳಿಕ  ಮಕಾವು ಓಪನ್‌ನಲ್ಲಿ ಪ್ರಶಸ್ತಿಯ ಹ್ಯಾಟ್ರಿಕ್‌ ಗಳಿಸಿದ್ದರು. ಬ್ಯಾಡ್ಮಿಂಟನ್‌ನಲ್ಲಿ ಅವರ ಸಾಧನೆಯನ್ನು ಗುರುತಿಸಿ ಅರ್ಜುನ ಪ್ರಶಸ್ತಿ ನೀಡಲಾಗಿತ್ತು. 2015 ರಲ್ಲಿ ದೇಶದ ಅತ್ಯುನ್ನತ ನಾಲ್ಕನೆ ನಾಗರಿಕ ಪುರಸ್ಕಾರ ಪದ್ಮಶ್ರೀ ಪ್ರಶಸ್ತಿಗೆ ಸಿಂಧು ಭಾಜನರಾಗಿದ್ದರು.
 ಸಿಂಧು ಅವರ ಕೋಚ್‌  ಪುಲ್ಲೇಲ ಗೋಪಿಚಂದ್ .  ಕಳೆದ ಹನ್ನೆರಡು ವರ್ಷಗಳಿಂದ ತರಬೇತಿ ನೀಡಿ ಸಿಂಧುವನ್ನು ಒಲಿಂಪಿಕ್ಸ್‌ ಚಾಂಪಿಯನ್‌ ಆಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗೋಪಿಚಂದ್‌ ಅವರ ಹೈದರಾಬಾದ್ ನ ಬ್ಯಾಡ್ಮಿಂಟನ್ ಅಕಾಡಮಿ ಇಬ್ಬರು ಬ್ಯಾಡ್ಮಿಂಟನ್ ಆಟಗಾರ್ತಿಯರನ್ನು ರೂಪಿಸಿ  ಅವರ ಮೂಲಕ ದೇಶಕ್ಕೆ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ದೇಶಕ್ಕೆ ತಂದುಕೊಟ್ಟಿದೆ.  ಗೋಪಿಚಂದ್ ಶಿಷ್ಯೆ ಸೈನಾ ನೆಹ್ವಾಲ್‌ 2012ರ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದ್ದರು
ಸಿಂಧು ಹೆತ್ತವರು ಮಾಜಿ ವಾಲಿಬಾಲ್ ಆಟಗಾರರು. ತಂದೆ ಪಿ.ವಿ.ರಮಣ  ಮತ್ತು ತಾಯಿ ಪಿ. ವಿಜಯಾ. ತಂದೆ ರಮಣ ಅವರು ಅರ್ಜುನ ಪ್ರಶಸ್ತಿ ಪುರಸ್ಕೃತ  ವಾಲಿಬಾಲ್‌ ಆಟಗಾರ. ಇವರು ಮಗಳಿಗೆ ಚಿಕ್ಕಂದಿನಲ್ಲೇ ಆಟದ ಪಾಠ ಹೇಳಿಕೊಟ್ಟಿದ್ದರು. ಎಂಟರ ಹರೆಯದಲ್ಲೇ ಸಿಂಧು ಬ್ಯಾಡ್ಮಿಂಟನ್‌ ಆಟದ ಕಡೆಗೆ ಗಮನ ಹರಿಸಿದ್ದರು. ಆರಂಭದಲ್ಲಿ ಸಿಕಂದರಾಬಾದ್ ನ ಇಂಡಿಯನ್ ರೈಲ್ವೇಯ ಕೋರ್ಟ್‌‌ನಲ್ಲಿ ಸಿಂಧು ಅವರು ಮೆಹಬೂಬ್‌ ಅಲಿ ಅವರಿಂದ ಬ್ಯಾಡ್ಮಿಂಟನ್‌ನ ಪ್ರಾಥಮಿಕ ಪಾಠ ಕಲಿತಿದ್ದರು. ಬಳಿಕ ಪಿ. ಗೋಪಿಚಂದ್ ಅವರ ಬ್ಯಾಡ್ಮಿಂಟನ್‌ ಅಕಾಡಮಿ ಸೇರ್ಪಡೆಗೊಂಡು ಸಿಂಧು ಬ್ಯಾಡ್ಮಿಂಟನ್‌ನಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ. 
ಸಿಂಧು ಸಾಧನೆ  
*2016: ಒಲಿಂಪಿಕ್ಸ್ ನಲ್ಲಿ  ಬೆಳ್ಳಿ(ಮಹಿಳೆಯರ ಸಿಂಗಲ್ಸ್‌ )
*2013 , 2014 : ವರ್ಲ್ಡ್  ಚಾಂಪಿಯನ್‌ಶಿಪ್‌ - ಕಂಚು (ಮಹಿಳೆಯರ ಸಿಂಗಲ್ಸ್‌ ) 
*2013,2016 :  ಮಲೇಷ್ಯಾ ಮಾಸ್ಟರ‍್ಸ್   ಗ್ರ‍್ಯಾನ್‌ ಪ್ರಿ ಗೋಲ್ಡ್‌  -ಚಾಂಪಿಯನ್‌ (ಮಹಿಳೆಯರ ಸಿಂಗಲ್ಸ್)
* 2013 , 2014 ,2015:  ಮಕಾವ್‌ ಓಪನ್ ಜಿಪಿ ಗೋಲ್ಡ್‌ -ಚಾಂಪಿಯನ್‌ (ಮಹಿಳೆಯರ ಸಿಂಗಲ್ಸ್‌)
*2014, 2016 : ಉಬೇರ‍್   ಕಪ್‌ -ಕಂಚು(ಮಹಿಳೆಯರ ತಂಡ )
*2014: ಏಶ್ಯನ್ ಗೇಮ್ಸ್ -ಕಂಚು  (ಮಹಿಳೆಯರ ತಂಡ)
*2014:ಕಾಮನ್‌ ವೆಲ್ತ್‌ ಗೇಮ್ಸ್  -ಕಂಚು  (ಮಹಿಳೆಯರ ಸಿಂಗಲ್ಸ್‌)
*2014: ಏಶ್ಯ ಗೇಮ್ಸ್ ನಲ್ಲಿ -ಕಂಚು(ಮಹಿಳೆಯರ  ಸಿಂಗಲ್ಸ್ )
*2016 :  ಸೌತ್‌ ಏಷ್ಯನ್‌ ಗೇಮ್ಸ್ -ಬೆಳ್ಳಿ (ಮಹಿಳೆಯರ ಸಿಂಗಲ್ಸ್‌)
*2016 :  ಸೌತ್‌ ಏಷ್ಯನ್‌ ಗೇಮ್ಸ್ -ಚಿನ್ನ (ಮಹಿಳೆಯರ ತಂಡ)
*2011: ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಶಿಪ್‌ - ಕಂಚು( ಗರ್ಲ್ಸ್‌ ಸಿಂಗಲ್ಸ್‌)
*2011: ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಶಿಪ್‌ - ಕಂಚು ( ಮಿಶ್ರ ಸಿಂಗಲ್ಸ್‌)
*2012:ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಶಿಪ್‌ - ಚಿನ್ನ ( ಗರ್ಲ್ಸ್‌ ಸಿಂಗಲ್ಸ್‌)
*2011: ಕಾಮನ್‌ ವೆಲ್ತ್ ಯೂತ್‌ ಗೇಮ್ಸ್‌ -ಚಿನ್ನ( ಗರ್ಲ್ಸ್‌ ಸಿಂಗಲ್ಸ್‌)

ರಾಷ್ಟ್ರೀಯ ಪುರಸ್ಕಾರ 
2013 :  ಅರ್ಜುನ ಪ್ರಶಸ್ತಿ, 2015: ಪದ್ಮಶ್ರೀ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X