ಮೊಲ ಎಂದು ಭಾವಿಸಿ 9 ವರ್ಷದ ಬಾಲಕಿಯನ್ನು ಕೊಂದರು
.jpg)
ಬೀಜಿಂಗ್, ಆ. 19: ಚೀನಾದ ಅನ್‌ಹುಯಿ ಪ್ರಾಂತದಲ್ಲಿ ಒಂಬತ್ತು ವರ್ಷದ ಬಾಲಕಿಯನ್ನು ಮೊಲ ಎಂಬುದಾಗಿ ಭಾವಿಸಿದ ಮೂವರು ಬೇಟೆಗಾರರು ಆಕೆಯನ್ನು ಗುಂಡಿಟ್ಟು ಕೊಂದ ಘಟನೆ ನಡೆದಿದೆ.
ಮೂವರು ಬೇಟೆಗಾರರು ಪಿಕ್-ಅಪ್ ಟ್ರಕ್ಕೊಂದರಲ್ಲಿ ಬೇಟೆಗೆ ಹೊರಟಿದ್ದರು. ಹೊಲವೊಂದರಲ್ಲಿ ಬಾಲಕಿ ಆಡುತ್ತಿರುವುದನ್ನು ಕಂಡರು.
‘‘ಅವರಲ್ಲಿ ಓರ್ವ ಬಾಲಕಿಯ ಹಣೆಗೆ ಗುಂಡು ಹಾರಿಸಿದ. ಬಳಿಕ ತಮ್ಮ ಅಚಾತುರ್ಯವನ್ನು ಮನಗಂಡ ಅವರು ಪರಾರಿಯಾದರು. ಬಾಲಕಿಯ ಹೆತ್ತವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಕೊನೆಯುಸಿರೆಳೆದಳು’’ ಎಂದು ‘ಚೀನಾ ಡೇಲಿ’ ವರದಿ ಮಾಡಿದೆ.
ಮೂವರು ಹಂತಕರು ಇತ್ತೀಚೆಗೆ ಪೊಲೀಸರಿಗೆ ಶರಣಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡರು ಎಂದು ಅದು ತಿಳಿಸಿದೆ.
Next Story





