ಮನೆಮಂದಿ ಮಲಗಿದ್ದಾಗಲೇ ಕೈಚಳಕ ತೋರಿದ ಕಳ್ಳರು!
ಮುಂಡಗೋಡ, ಆ.19: ತಾಲೂಕಿನ ಕಲಕೇರಿ ಗ್ರಾಮದ ಮನೆಯೊಂದರಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿ ಸುಮಾರು 22 ಸಾವಿರ ರೂ. ವೌಲ್ಯದ ಬಂಗಾರದ ಆಭರಣಗಳನ್ನು ಎಗರಿಸಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಕಲಕೇರಿ ಗ್ರಾಮದ ಕುಬೇರ ಬಸಪ್ಪಕ್ಯಾತನಳ್ಳಿ ಎಂಬವರ ಮನೆಯಿಂದ ಕಳ್ಳರು ಚಿನ್ನಾಭರಣಗಳನ್ನು ದೋಚಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





